×
Ad

'ಜಲ್ ಜೀವನ್ ಮಿಷನ್': ಇಲ್ಲಿಯ ತನಕ ಸಾಧಿಸಿದ ಪ್ರಗತಿ ಕೇವಲ ಶೇ. 17

Update: 2021-12-30 17:22 IST
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೇಂದ್ರ ಸರಕಾರ  'ಹರ್ ಘರ್ ಜಲ್' ಎಂಬ ಘೋಷಣೆಯೊಂದಿಗೆ ಆಗಸ್ಟ್ 2019ರಲ್ಲಿ ಜಾರಿಗೊಳಿಸಿದ್ದ ಜಲ ಜೀವನ್ ಮಿಷನ್ 2024ರೊಳಗಾಗಿ ಪ್ರತಿ ಮನೆಗೆ ನಳ್ಳಿ ನೀರು ಒದಗಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಆದರೆ ಸರಕಾರಿ ಅಂಕಿಅಂಶಗಳ ಪ್ರಕಾರ 2019ರಲ್ಲಿ ಒಟ್ಟು 19.22 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಕೇವಲ 3.23 ಕೋಟಿ(ಶೇ .17)  ಗ್ರಾಮೀಣ ಮನೆಗಳಿಗೆ ನಳ್ಳಿ ನೀರು  ಸಂಪರ್ಕ ಒದಗಿಸಲಾಗಿದೆ. ಉಳಿದ 16 ಕೋಟಿ ಕುಟುಂಬಗಳಿಗೆ (ಶೇ 83ರಷ್ಟು) 2024ರೊಳಗೆ ನಳ್ಳಿ ನೀರು ಸಂಪರ್ಕ ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದು economictimes.indiatimes.com ವರದಿ ಮಾಡಿದೆ.

ಡಿಸೆಂಬರ್ 25 ರಲ್ಲಿದ್ದಂತೆ ದೇಶದಲ್ಲಿ 83 ಜಿಲ್ಲೆಗಳ 1.29 ಲಕ್ಷ ಗ್ರಾಮಗಳ  8.70 ಕೋಟಿ (ಶೇ 45.32) ಗ್ರಾಮೀಣ ಮನೆಗಳು ನಳ್ಳಿ ನೀರು ಸರಬರಾಜು ಪಡೆಯುತ್ತಿವೆ. ಗೋವಾ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರಾ ಮತ್ತು ನಗರ್ ಹವೇಲಿ, ದಾಮನ್ ದಿಯು, ಪುದುಚ್ಚೇರಿ ಮತ್ತು ಹರ್ಯಾಣ ಶೇ. 100ರಷ್ಟು ಪ್ರಗತಿ ಸಾಧಿಸಿ ಹರ್ ಘರ್ ಜಲ್ ರಾಜ್ಯಗಳಾಗಿವೆ,'' ಎಂದು ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ.

ಆದರೆ ಹಲವು ರಾಜ್ಯಗಳಲ್ಲಿ ಯೋಜನೆಯು ನಿರೀಕ್ಷಿತ ಪ್ರಗತಿ ಕಂಡಿಲ್ಲ. ಉದಾಹರಣೆಗೆ ಮಧ್ಯಪ್ರದೇಶ 2023ರಲ್ಲಿ ಶೇ 100ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಿದೆ.  ಅಂಕಿಅಂಶಗಳ ಪ್ರಕಾರ ಪ್ರಸ್ತುತ ಅಲ್ಲಿನ 1,22,27,914 ಮನೆಗಳ ಪೈಕಿ 45,10,061 (ಶೇ. 36) ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಒದಗಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News