ಅಗತ್ಯ ಬಿದ್ದರೆ ಮಿಷನರೀಸ್ ಆಫ್ ಚ್ಯಾರಿಟಿ ಸಂಸ್ಥೆಗಳನ್ನು ನಡೆಸಲು ಸಿಎಂ ಪರಿಹಾರ ನಿಧಿ ಬಳಕೆ: ನವೀನ್ ಪಟ್ನಾಯಕ್
Update: 2021-12-30 18:47 IST
ಭುಬನೇಶ್ವರ್: ಒಡಿಶಾದಲ್ಲಿರುವ ಮಿಷನರೀಸ್ ಆಫ್ ಚ್ಯಾರಿಟಿ ಆಡಳಿತದ ಆಶ್ರಯತಾಣಗಳು ಮತ್ತು ಅನಾಥಾಲಯಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುವಂತಾಗಲು ಕ್ರಮಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಕಲೆಕ್ಟರುಗಳಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೂಚಿಸಿದ್ದಾರಲ್ಲದೆ, ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಈ ಉದ್ದೇಶಕ್ಕೆ ಹಣ ಬಳಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಕೆಲವೊಂದು ಅರ್ಹತಾ ನಿಯಮಗಳನ್ನು ಪಾಲಿಸದೇ ಇರುವುದರಿಂದ ಮಿಷನರೀಸ್ ಆಫ್ ಚ್ಯಾರಿಟಿಯು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ವಯದ ನೋಂದಣಿಯನ್ನು ನವೀಕರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ತಿಳಿಸಿತ್ತು.