ತ್ರಿಪುರಾದಲ್ಲಿ ಯುವ ಜನರಿಂದ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ

Update: 2021-12-30 17:30 GMT
Photo: TIWN 

ಅಗರ್ತಲಾ, ಡಿ. 30: ತ್ರಿಪುರಾ ಪೊಲೀಸ್ ಅಡಿಯಲ್ಲಿ ಬರುವ ತ್ರಿಪುರಾ ರಾಜ್ಯ ರೈಫಲ್ಸ್, ಬಂಡುಕೋರ ನಿಗ್ರಹ ಪಡೆಯಲ್ಲಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿ ಬಿಜೆಪಿ ನಾಯಕರು ಹಣ ತೆಗೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಿ ನೂರಾರು ಯುವ ಜನರು ತ್ರಿಪುರಾದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ಸೋಮವಾರ ಬಿಡುಗಡೆ ಮಾಡಲಾದ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಹೆಸರಿಲ್ಲದೇ ಇರುವುದರಿಂದ ಆಕ್ರೋಶಿತರಾದ ಯುವ ಜನರು ರಾಜ್ಯದ ವಿವಿಧ ಭಾಗಗಳಲ್ಲಿರುವ ಬಿಜೆಪಿ ಕಚೇರಿಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ಹಲವು ಯುವಕರು ತಾವು ಬಿಜೆಪಿ ಬೆಂಬಲಿಗರು ಎಂದು ಹೇಳಿಕೊಂಡಿದ್ದಾರೆ. ಈ ಆಯ್ಕೆ ಪಟ್ಟಿ ಕುರಿತಂತೆ ಉತ್ತರ ತ್ರಿಪುರಾದ ಬಿಜೆಪಿ ಶಾಸಕ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅನಂತರ ಅವರು ಆ ಪೋಸ್ಟ್ ಅನ್ನು ಅಳಿಸಿದ್ದಾರೆ. ರೈಫಲ್ಮೆನ್ ಹಾಗೂ ರೈಫಲ್ಮೆನ್ (ಟ್ರೇಡ್ಸ್ಮೆನ್) ಹುದ್ದೆಗೆ ಆಯ್ಕೆಯಾದ 136 ಮಹಿಳೆಯರು ಸೇರಿದಂತೆ 1443 ಅಭ್ಯರ್ಥಿಗಳ ಪಟ್ಟಿ ಯನ್ನು ಬಿಡುಗಡೆ ಮಾಡಲಾಗಿತ್ತು ಎಂದು ತ್ರಿಪುರಾ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News