×
Ad

ರೈಲ್ವೆ ನಿಗಮದ ನೂತನ ಚೇರ್‌ಮನ್, ಸಿಇಓ ಆಗಿ ವಿನಯಕುಮಾರ್ ತ್ರಿಪಾಠಿ ನೇಮಕ

Update: 2021-12-31 23:46 IST
Photo PTI

ಹೊಸದಿಲ್ಲಿ,ಡಿ.31: ರೈಲ್ವೆ ಮಂಡಳಿಯ ಚೇರ್‌ಮನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಈಶಾನ್ಯ ರೈಲ್ವೆಯ ಜನರಲ್ ಮ್ಯಾನೇಜರ್ ವಿನಯ್ ಕುಮಾರ್ ತ್ರಿಪಾಠಿ ಅವರ ನೇಮಕಕ್ಕೆ ನೇಮಕಾತಿಗಳಿಗಾಗಿನ ಸಂಪುಟ ಸಮಿತಿಯು ಶುಕ್ರವಾರ ಅನುಮೋದನೆ ನೀಡಿದೆ.

   ರೂರ್ಕಿಯ ಐಐಟಿಯಲ್ಲಿ ಬಿಟೆಕ್ ಎಂಜಿನಿಯರಿಂಗ್ ಪದವೀಧರರಾದ ತ್ರಿಪಾಠಿ 1983ರಲ್ಲಿ ಇಲೆಕ್ಟ್ರಿಕ್ ಎಂಜಿನಿಯರ್‌ಗಳ ಭಾರತೀಯ ರೈಲ್ವೆ ಸೇವೆಗೆ ಸೇರ್ಪಡೆಗೊಂಡಿದ್ದರು. ಮೊದಲಿಗೆ ಅವರು ಉತ್ತರ ರೈಲ್ವೆಯಲ್ಲಿ ಸಹಾಯಕ ಇಲೆಕ್ಟ್ರಿಕ್ ಎಂಜಿನಿಯರ್ ಆಗಿ ನಿಯುಕ್ತಿಗೊಂಡಿದ್ದರು.

 ತ್ರಿಪಾಠಿ ಅವರು ತನ್ನ ಸೇವಾವಧಿಯಲ್ಲಿ ಉತ್ತರ, ಕೇಂದ್ರ ಹಾಗೂ ಪಶ್ಚಿಮ ರೈಲ್ವೆಯ ಇಲೆಕ್ಟ್ರಿಕಲ್ ವಿಭಾಗದ ಪ್ರಮುಖ ಹುದ್ದೆಗಳಲ್ಲಿ ಯಶಸ್ವಿಯಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಉತ್ತರ ಕೇಂದ್ರ ರೈಲ್ವೆ ಅಲಹಾಬಾದ್‌ನ ವಿಭಾಗೀಯ ರೈಲ್ವೆ ಮ್ಯಾನೇಜರ್, ಮುಖ್ಯ ಇಲೆಕ್ಟ್ರಿಕಲ್ ಲೋಕೊಮೋಟಿವ್ ಎಂಜಿನಿಯರ್, ಪಶ್ಚಿಮ ರೈಲ್ವೆಯ ಹೆಚ್ಚುವರಿ ಮಹಾಪ್ರಬಂಧಕ ಹಾಗೂ ರೈಲ್ವೆ ನಿಗಮದ ಹೆಚ್ಚುವರಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News