ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆ: Dove, Tresemme ಸೇರಿದಂತೆ ಡ್ರೈ ಶಾಂಪೂಗಳನ್ನು ಹಿಂಪಡೆದ ಯುನಿಲಿವರ್‌

Update: 2023-06-05 10:30 GMT
ಸಾಂದರ್ಭಿಕ ಚಿತ್ರ (PTI)

ನ್ಯೂಯಾರ್ಕ್: ಡವ್‌ (Dove) ಸಹಿತ ತನ್ನ ಜನಪ್ರಿಯ ಏರೋಸೋಲ್‌ ಡ್ರೈ ಶಾಂಪೂ ( aerosol dry shampoo) ಬ್ರ್ಯಾಂಡ್‌ಗಳನ್ನು ಯುನಿಲಿವರ್‌ (Unilever) ಪಿಎಲ್‌ಸಿ ಮಾರುಕಟ್ಟೆಯಿಂದ ಹಿಂಪಡೆದಿದೆ. ಈ ಉತ್ಪನ್ನಗಳು ಕ್ಯಾನ್ಸರ್‌ ಉಂಟು ಮಾಡಬಹುದಾದ ಬೆನ್ಝೀನ್‌ ಎಂಬ ಹಾನಿಕಾರಕ ರಾಸಾಯನಿಕವನ್ನು ಹೊಂದಿದೆ ಎಂದು ಕಂಡುಬಂದ ನಂತರ ಈ ಕ್ರಮಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. 

ರಾಕಾಹೋಲಿಕ್‌ ಮತ್ತು ಬೆಡ್‌ ಹೆಡ್‌ ಡ್ರೈ ಶಾಂಪೂಗಳನ್ನು ತಯಾರಿಸುವ Nexxus, Suave, Tresemmé‌,Tigi ಉತ್ಪನ್ನಗಳನ್ನು ವಾಪಸ್‌ ಪಡೆದುಕೊಳ್ಳಲಾಗಿದೆ. ಫುಡ್‌ ಎಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌ನ ವೆಬ್‌ಸೈಟ್‌ನಲ್ಲಿ ಇಂದು ಪೋಸ್ಟ್‌ ಮಾಡಲಾಗಿರುವ ನೋಟಿಸ್‌ನಲ್ಲಿ ಈ ಕುರಿತಾದ ಮಾಹಿತಿಯಿದೆ.‌

ಅಕ್ಟೋಬರ್‌ 2021 ಗಿಂತ ಮುಂಚೆ ತಯಾರಿಸಲಾದ ಮೇಲಿನ ಉತ್ಪನ್ನಗಳನ್ನು ಯುನಿಲಿವರ್‌ ವಾಪಸ್‌ ಪಡೆದುಕೊಂಡಿದೆ. ಪರ್ಸನಲ್‌ ಕೇರ್‌ ಉತ್ಪನ್ನಗಳಲ್ಲಿ ಏರೋಸೋಲ್‌ಗಳ ಬಳಕೆಯ ಸುರಕ್ಷತತೆಯ ಅಂಶವನ್ನು ಈ ಕ್ರಮ ಮತ್ತೆ ಮುನ್ನೆಲೆಗೆ ತಂದಿದೆ. ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ ಜಾನ್ಸನ್‌ ಎಂಡ್‌ ಜಾನ್ಸನ್‌ನ ನ್ಯೂಟ್ರೋಜೆನಾ, ಎಡ್ಜ್‌ವೆಲ್‌ ಪರ್ಸನಲ್‌ ಕೇರ್ ಕೋ ಸಂಸ್ಥೆಯ ಬನಾನಾ ಬೋಟ್‌ ಹಾಗೂ ಬೀರ್ಸ್‌ಡೋರ್ಫ್‌ನ ಕಾಪರ್‌ಸ್ಟೋನ್‌, ಪ್ರಾಕ್ಟರ್‌ ಎಂಡ್‌ ಗ್ಯಾಂಬಲ್‌ ಸಂಸ್ಥೆಯ ಸೀಕ್ರೆಟ್‌ ಮತ್ತು ಓಲ್ಡ್‌ ಸ್ಪೈಸ್‌ ಮತ್ತು ಯುನಿಲಿವರ್‌ನ Suave ಉತ್ಪನ್ನಗಳನ್ನು ವಾಪಸ್‌ ಪಡೆದುಕೊಳ್ಳಲಾಗಿದೆ.

ಡ್ರೈ ಶಾಂಪೂಗಳಂತಹ ಸ್ಪ್ರೇ-ಆನ್‌ ಪರ್ಸನಲ್‌ ಕೇರ್‌ ಉತ್ಪನ್ನಗಳು ಪ್ರೊಪೇನ್‌ ಮತ್ತು ಬುಟೇನ್‌ ನಂತಹ ಪ್ರೊಪೆಲ್ಲೆಂಟ್‌ಗಳನ್ನು ಹೊಂದಿವೆ.  

ಇದನ್ನೂ ಓದಿ: 'ಹೆಡ್‌ಬುಶ್‌' ಸಿನಿಮಾ ಕುರಿತು ವಿವಾದ: ನಟ ಧನಂಜಯ್ ಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News