ಮುಸ್ಲಿಂ ಮಹಿಳೆಯರಿಗೆ ಅವಮಾನ: ವೆಬ್‌ಪೇಜ್‌ ವಿರುದ್ಧ ಪ್ರಕರಣ ದಾಖಲಿಸಿದ ದಿಲ್ಲಿ ಪೊಲೀಸರು

Update: 2022-01-02 18:15 GMT
Photo: Newsroom post

ಹೊಸದಿಲ್ಲಿ, ಜ. 2: ‘ಬುಲ್ಲಿ ಬಾಯಿ’ ಆ್ಯಪ್ನ ಹಿಂದಿರುವ ‘ಗಿಟ್ಹಬ್’ ಆ್ಯಪ್ನ ಬಳಕೆದಾರನನ್ನು ನಿರ್ಬಂಧಿಸಲಾಗಿದೆ ಹಾಗೂ ಮುಂದಿನ ಕ್ರಮಗಳನ್ನು ಸಂಘಟಿಸಲಾಗುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಎರಡು ಸಾಲು ಟ್ವೀಟ್ ಮಾಡಿದ್ದಾರೆ.

ಬಲಪಂಥೀಯ ಉಗ್ರರು ‘ಸುಲ್ಲಿ ಡೀಲ್ಸ್’ನಲ್ಲಿ ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದರು. ಒಂದು ವರ್ಷದ ಒಳಗೆ ಅದರ ತದ್ರೂಪಿ ‘ಬುಲ್ಲಿ ಬಾಯಿ’ ಆ್ಯಪ್ ಮುಸ್ಲಿಮ್ ಮಹಿಳೆಯರ ಹರಾಜಿಗೆ ತೊಡಗಿದೆ. ಅತಿಯಾದ ಸ್ತ್ರೀದ್ವೇಷ ಹಾಗೂ ಮಹಿಳೆಯರನ್ನು ಗುರಿಯಾಗಿರಿಸಿ ಕೋಮುದ್ವೇಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶನಿವಾರ ಟ್ಯಾಗ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಅವರು ಈ ಸಂಕ್ಷಿಪ್ತ ಸಂದೇಶ ಹಾಕಿದ್ದಾರೆ.

‘‘ಬಳಕೆದಾರನನ್ನು ನಿರ್ಬಂಧಿಸಿರುವುದನ್ನು ಗಿಟ್ ಹಬ್ (ಮೈಕ್ರೋ ಸಾಫ್ಟ್ ಮಾಲಿಕತ್ವದ ವೇದಿಕೆ. ಬುಲ್ಲಿ ಬಾಯಿ ಅಪ್ಲಿಕೇಶನ್ ಅನ್ನು ರೂಪಿಸಲು ಹಾಗೂ ನಡೆಸಲು ಈ ಶೇರಿಂಗ್ ವೇದಿಕೆಯನ್ನುಬಳಸಲಾಗುತ್ತದೆ) ಇಂದು ಬೆಳಗ್ಗೆ ದೃಢಪಡಿಸಿದೆ. ಮುಂದಿನ ಕ್ರಮವನ್ನು ಸಿಇಆರ್ಟಿ (ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಥವಾ ಎಂಇಐಟಿವೈಯ ಒಳಗಿರುವ ಕಚೇರಿ ಕಂಪ್ಯೂಟರ್ ತುರ್ತು ಪ್ರತಿಸ್ಪಂದನ ತಂಡ) ಹಾಗೂ ಪೊಲೀಸ್ ಅಧಿಕಾರಿಗಳು ಸಂಯೋಜಸುತ್ತಿದ್ದಾರೆ’’ ಎಂದು ಅವರು ವೈಷ್ಣವ್ ತಿಳಿಸಿದ್ದಾರೆ.

ಟ್ವೀಟ್ಗೆ ಚತುರ್ವೇದಿ ಅವರು ವಂದನೆ ಸಲ್ಲಿಸಿದ್ದಾರೆ. ಆದರೆ ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಚತುರ್ವೇದಿ ಅವರ ಕೋರಿಕೆಯ ಮೇರೆಗೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಬುಲ್ಲಿ ಬಾಯಿ’ಯಲ್ಲಿ ತಮ್ಮ ಹೆಸರಿದೆ ಎಂದು ಹೇಳಿಕೊಳ್ಳುತ್ತಿರುವ ಅನೇಕ ಮಹಿಳೆಯರಲ್ಲಿ ಓರ್ವರಾದ ಪತ್ರಕರ್ತೆ ಇಸ್ಮತ್ ಅರಾ ಅವರು ದಾಖಲಿಸಿದ ಪ್ರಕರಣದ ಕುರಿತು ಕೂಡ ದಿಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ‘ಸುಲ್ಲಿ ಡೀಲ್ಸ್’ನ ತದ್ರೂಪಿಯಾಗಿದೆ.

‘ಸುಲ್ಲಿ ಡೀಲ್ಸ್’ನಲ್ಲಿ ಬಲಪಂಥೀಯ ಉಗ್ರರು ಮುಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದರು. ಮುಸ್ಲಿಮ್ ಮಹಿಳೆಯರನ್ನು ಅವಮಾನಿಸಲು ಬಲಪಂಥೀಯ ಉಗ್ರರು ಹಾಗೂ ಟ್ರೋಲರ್ಗಳು ಬಳಸುವ ಪದ ಇದಾಗಿದೆ. ‘‘ಒಬ್ಬಳು ಮುಸ್ಲಿಂ ಮಹಿಳೆಯಾಗಿ ನೀವು ನಿಮ್ಮ ಹೊಸ ವರ್ಷವನ್ನು ಭೀತಿ ಹಾಗೂ ಅಸಹ್ಯಕರವಾಗಿ ಆರಂಭಿಸಬೇಕಾಗಿರುವುದು ದುಃಖಕರವಾಗಿದೆ. ಸುಲ್ಲಿ ಡೀಲ್ಸ್ನ ಈ ನೂತನ ಆವೃತ್ತಿಯಲ್ಲಿ ನಾನು ಮಾತ್ರ ಗುರಿಯಾಗಿರುವುದಲ್ಲ ಎಂದು ಹೇಳದೇ ಇದ್ದರೆ ಅಪೂರ್ಣವಾದೀತು. ಗೆಳೆಯ ಇದು ಬೆಳಗ್ಗೆ ಸ್ಕ್ರೀನ್ ಶಾಟ್ ಕಳುಹಿಸಿದ’’ ಎಂದು ಇಸ್ಮತ್ ಅರಾ ಟ್ವೀಟ್ ಮಾಡಿದ್ದಾರೆ. ಸುಲ್ಲಿ ಡೀಲ್ನಂತೆ ಅಸಹ್ಯಕರವಾದ ಬುಲ್ಲಿ ಬಾಯಿಯಲ್ಲಿ ನನ್ನನ್ನೂ ಒಳಗೊಂಡಂತೆ ಅನೇಕ ಮುಸ್ಲಿಂ ಹೆಸರುಗಳಿವೆ. ನಜೀಬ್ ತಾಯಿಯನ್ನು ಕೂಡ ಈ ಪಟ್ಟಿ ಹೊರತುಪಡಿಸಿಲ್ಲ. ಇದು ಭಾರತದ ಮುರಿದ ನ್ಯಾಯ ವ್ಯವಸ್ಥೆ ಹಾಗೂ ಶಿಥಿಲಗೊಂಡ ಕಾನೂನು ಮತ್ತು ಸುವ್ಯವಸ್ಥೆಯ ಪ್ರತಿಬಿಂಬವಾಗಿದೆ. ಭಾರತ ಮಹಿಳೆಯರಿಗೆ ಹೆಚ್ಚು ಅಸುರಕ್ಷಿತ ದೇಶವಾಗುತ್ತಿದೆಯೇ ? ಎಂದು ಜನಪ್ರಿಯ ರೇಡಿಯೊ ವ್ಯಕ್ತಿ ಸಯೀಮಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News