ಮಂಗಳೂರು: ಅಸ್ಸುಫ್ಫಾ ಫೌಂಡೇಶನ್‌ ವತಿಯಿಂದ ʼವ್ಯಕ್ತಿತ್ವ ವಿಕಸನʼ ತರಗತಿಯ ಉದ್ಘಾಟನೆ

Update: 2022-01-04 06:44 GMT

ಮಂಗಳೂರು: "ಮುಂದಿನ ಪೀಳಿಗೆಯ ಯುವ ಸಮುದಾಯವನ್ನು ಸದೃಢಗೊಳಿಸುವ, ಕೆಡುಕುಗಳಿಂದ ಮುಕ್ತಗೊಳಿಸುವ, ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸುವ ಇಂತಹಾ ತರಗತಿ ಮತ್ತು ತರಬೇತಿ ಪ್ರಸಕ್ತ ಕಾಲಘಟ್ಟಕ್ಕೆ ಅನಿವಾರ್ಯವಾಗಿದೆ" ಎಂದು ಶೈಖುನಾ ಮುಹಮ್ಮದ್ ಮದನಿ, ಜೆಪ್ಪು ಹೇಳಿದರು. ಮಂಗಳೂರಿನಲ್ಲಿ ಅಸ್ಸುಫ್ಫಾ ಫೌಂಡೇಶನ್‌ ಹಮ್ಮಿಕೊಂಡಿದ್ದ ವಾರದ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. 

ಮಂಗಳೂರಿನ ಜೆಪ್ಪು ನಂದಿಗುಡ್ಡೆಯ ಅಸ್ಸುಫ್ಫಾ ಫೌಂಡೇಶನ್‌ ನ ಕಟ್ಟಡದಲ್ಲಿ ಪ್ರತಿ ವಾರ ವ್ಯಕ್ತಿತ್ವ ವಿಕಸನ ತರಗತಿಗಳು ನಡೆಯಲಿದ್ದು, ಜನಸಾಮಾನ್ಯರು, ಪ್ರತ್ಯೇಕವಾಗಿ ಯುವಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಆನ್‌ ಲೈನ್‌ ತರಗತಿಯೂ ಲಭ್ಯವದ್ದು, ಆಸಕ್ತರು 7411384313 ಸಂಖ್ಯೆಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದಾಗಿ ಎಂದು ಪ್ರಕಟನೆ ತಿಳಿಸಿದೆ. 

ʼಅರಿವಿನ ಮಹತ್ವʼ ಕುರಿತಂತೆ ಮಾತನಾಡಿದ ಜೆಪ್ಪು ಉಸ್ತಾದ್, "ಇಂತಹಾ ತರಗತಿಗಳನ್ನು ನಡೆಸುವುದು ಸದ್ಯದ ಕಾಲಘಟ್ಟದ ಅನಿವಾರ್ಯವಾಗಿದೆ. ಯುವಕರನ್ನು ಸಮಾಜದ ಸೊತ್ತಾಗಿ ಬೆಳೆಸುವ ಅವಶ್ಯಕತೆ ಇದೆ. ಮಂಗಳೂರಿಗೆ ಮಾತ್ರ ಸೀಮಿತವಾಗದೇ ರಾಜ್ಯದ ಮೂಲೆಮೂಲೆಗಳಲ್ಲೂ ಇದು ಕಾರ್ಯೋನ್ಮುಖವಾಗಲಿ" ಎಂದು ಅವರು ಹಾರೈಸಿದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಮುಹಮ್ಮದ್‌ ಮಿಅರಾಜ್‌ ಅಲ್‌ ಹಾದೀ ಅಲ್‌ ಅಶ್ಹರೀ ನೆರವೇರಿಸಿದರು. ಅಸ್ಸುಫ್ಫಾ ಫೌಂಡೇಶನ್‌ ನ ಚೇರ್‌ಮ್ಯಾನ್ ಮುಹಮ್ಮದ್‌ ರಶೀದ್‌ ಸಅದಿ ಬೋಳಿಯಾರ್‌ ಸ್ವಾಗತ ಕೋರಿದರು. ವಾರದ ತರಗತಿಯನ್ನು ಉದ್ಘಾಟಿಸಿದ ಶೈಖುನಾ ಮುಹಮ್ಮದ್ ಮದನಿ ಜೆಪ್ಪು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸುಫ್ಫಾ ಫೌಂಡೇಶನ್‌ ನ ವೈಸ್‌ ಚೇರ್‌ಮ್ಯಾನ್ ಮುಹಮ್ಮದ್‌ ಅಮೀನ್‌ ‌ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಮುಖ್ಯ ಸ್ಥರದ ಹಲವು ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News