ಗಲ್ವಾನ್ ಕಣಿವೆಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಭಾರತೀಯ ಸೇನೆ: ಕೇಂದ್ರ ಸಚಿವ ಕಿರಣ್ ರಿಜಿಜು ಟ್ವೀಟ್

Update: 2022-01-04 14:34 GMT
photo:PTI

ಹೊಸದಿಲ್ಲಿ,ಜ.4: ಭಾರತೀಯ ಸೈನಿಕರು ಹಾಗೂ ಚೀನಿ ಪಡೆಗಳ ನಡುವೆ 2020ರಲ್ಲಿ ಭೀಕರ ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯು ಹೊಸವರ್ಷದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದೆ. ಈ ಬಗ್ಗೆ ಕೇಂದ್ರ ಸಚಿವ ಕಿರಣ್ ರಿಜಿಜು ಮಂಗಳವಾರ ಟ್ವೀಟ್ ಮಾಡಿದ್ದಾರೆ. ಗಲ್ವಾನ್ ಕಣಿವೆಯಲ್ಲಿ ತಮ್ಮ ದೇಶದ ಧ್ವಜವನ್ನು ಹಾರಿಸಿರುವುದಾಗಿ ಹೇಳಿಕೊಂಡು ಚೀನಿ ಪಡೆಗಳು ಚೀನಾದ ಸರಕಾರಿ ಮಾಧ್ಯಮವೊಂದರಲ್ಲಿ ಪ್ರಸಾರ ಮಾಡಿದ ಟ್ವೀಟ್ ಒಂದರಲ್ಲಿ ಗಲ್ವಾನ್ ಕಣಿವೆಯಲ್ಲಿ ತಮ್ಮ ಧ್ವಜದೊಂದಿಗೆ ತಾವಿರುವ ಛಾಯಾಚಿತ್ರವನ್ನು ಪ್ರಕಟಿಸಿದ ಬೆನ್ನಲ್ಲೇ ರಿಜಿಜು ಹೀಗೆ ಟ್ವೀಟಿಸಿದ್ದಾರೆ.

ಈ ಮಧ್ಯೆ ಭಾರತೀಯ ಸೇನಾಮೂಲಗಳು ಎನ್‌ಡಿಟಿವಿ ಸುದ್ದಿಸಂಸ್ಥೆಗೆ ನೀಡಿದ ಸ್ಪಷ್ಟೀಕರಣವೊಂದರಲ್ಲಿ ಗಲ್ವಾನ್ ಪ್ರದೇಶದಲ್ಲಿ ಉಭಯದೇಗಳು ಮಿಲಿಟರೀಕರಣ ರಹಿತ ವಲಯವನ್ನು ಉಲ್ಲಂಘಿಸಿಲ್ಲವೆಂದು ತಿಳಿಸವೆ.

2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ನಡೆದ ಬಳಿ ಹಲವಾರು ಸುತ್ತುಗಳ ಸೇನಾ ಹಾಗೂ ರಾಜತಾಂತ್ರಿಕ ಮಾತುಕತೆಗಳು ನಡೆದಿವೆಯಾದರೂ, ಅಂತಿಮವಾಗಿ ಯಾವುದೇ ಇತ್ಯರ್ಥಕ್ಕೆ ಬರಲು ಸಾಧ್ಯವಾಗಲಿಲ್ಲ.
ಕಳೆದ ವರ್ಷದ ಜುಲೈನಲ್ಲಿ ಪ್ರಕಟವಾದ ಉಪಗ್ರಹಚಿತ್ರಗಳು ಕಡು ಚಳಿಗಾಲದಲ್ಲಿಯೂ ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಿ ಪಡೆಗಳು ಇಕ್ಕೆಲಗಳಲ್ಲಿ ತಮ್ಮ ಪಡೆಗಳನ್ನು ಇನ್ನೂ ಅಗಾಧ ಸಂಖ್ಯೆಯಲ್ಲಿ ನಿಯೋಜಿಸಿವೆ ಎಂದು ಮೂಲಗಳು ತಿಳಿಸಿವೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ವಿಶೇಷ ಪ್ರತಿನಿಧಿ ಮಟ್ಟದ ಸಭೆಗಳು ಉಭಯದೇಶಗಳ ಸೇನಾಪಡೆಗಳು ಗಲ್ವಾನ್ ಕಣಿವೆಯ ಸಂಘರ್ಷದ ಸ್ಥಳದಿಂದ ಎರಡು ಕಿ.ಮೀ.ನಷ್ಟು ಹಿಂದೆ ಸರಿದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News