ಎಲ್ಲಾ ಪಂಜಾಬಿಗಳನ್ನು ರಕ್ಷಣಾ ಪಡೆಗಳಿಂದ ತೆಗೆದು ಹಾಕಿ, ಎಂದ ಬಿಜೆಪಿ ಬೆಂಬಲಿಗ ಸಾಗರ್ ದುಬೆ: ಆಡಿಯೊ ವೈರಲ್‌

Update: 2022-01-08 06:25 GMT
Twitter video screengrab

ಹೊಸದಿಲ್ಲಿ: ಬಿಜೆಪಿ ಬೆಂಬಲಿಗನೆಂದು ಹೇಳಿಕೊಳ್ಳುವ ಸಾಗರ್ ದುಬೆ ಎಂಬಾತ ಕ್ಲಬ್‍ಹೌಸ್‍ನಲ್ಲಿ ನಡೆದ ವರ್ಚುವಲ್ ಸಂವಾದವೊಂದರಲ್ಲಿ ಆಡಿದ ಮಾತುಗಳು ವಿವಾದಕ್ಕೀಡಾಗಿವೆ. ಈ ಕುರಿತು ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ಟ್ವೀಟ್‌ ಮಾಡಿದ್ದಾರೆ. "ಪ್ರತಿಯೊಬ್ಬ ಪಂಜಾಬಿಯನ್ನು ಸೇನೆ ಹಾಗೂ ರಕ್ಷಣಾ ಸಂಸ್ಥೆಗಳಿಂದ ತೆಗೆದು ಹಾಕಿ, ಪಂಜಾಬಿ ಜನರಲ್, ಸೈನಿಕರು, ಮೇಲಿನ ಹುದ್ದೆಗಳಿಂದ ಕೆಳಗಿನ ಹುದ್ದೆಗಳಲ್ಲಿರುವವರನ್ನು ತೆಗೆದು ಹಾಕಿ, ಇದರಿಂದ ಅವರಲ್ಲಿ ಎಷ್ಟು ಜನ ಸೇನೆಗೆ ಸೇರುತ್ತಾರೆಂದು ನಾನು ಯಾವತ್ತೂ ಕೇಳದಂತಾಗಬೇಕು,'' ಎಂದು ಹೇಳಿದ ದುಬೆ ಪಂಜಾಬಿಗಳ ವಿರುದ್ಧ ನಿಂದನೆಗಳ ಸುರಿಮಳೆಯನ್ನೂ ಹರಿಸಿದ್ದಾನೆ.

ಸಾಗರ್ ದುಬೆಯನ್ನು ಟ್ವಿಟ್ಟರ್‍ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಬಲಪಂಥೀಯ ವೆಬ್ಸೈಟ್ ಓಪಿ ಇಂಡಿಯಾ ಮುಖ್ಯ ಸಂಪಾದಕಿ ನೂಪುರ್ ಜೆ ಶರ್ಮ ಕೂಡ ಅನುಸರಿಸುತ್ತಿದ್ದಾರೆ. ಆತನ ವೀಡಿಯೋ ಕ್ಲಿಪ್ ವೈರಲ್ ಆಗುತ್ತಿದ್ದಂತೆಯೇ ತನ್ನ ಟ್ವಿಟ್ಟರ್ ಖಾತೆಯನ್ನು ಆತ ಡಿಲೀಟ್ ಮಾಡಿದ್ದಾನೆ. ಈ ನಿರ್ದಿಷ್ಟ ಚರ್ಚಾಗೋಷ್ಠಿಯಲ್ಲಿ ನೂಪುರ್ ಶರ್ಮ ಕೂಡ ಹಾಜರಿದ್ದರು.

ಬಳಿಕ ಈ ಬಗ್ಗೆ ಟ್ವೀಟ್‌ ಮಾಡಿರುವ ಶರ್ಮಾ, "45 ಸೆಕೆಂಡ್‌ ನ ಕ್ಲಿಪ್‌ ತೆಗೆದು ಜನರನ್ನು ಅಪಮಾನಕ್ಕೀಡಾಗಿಸುವುದು ಸುಲಭ. ಆದರೆ ಇಂತಹಾ ದೋಷಾರೋಪಣೆಗಳ ಸ್ಪಷ್ಟತೆಯ ಕುರಿತು ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುವುದನ್ನು ನನಗೆ ಅರ್ಥೈಸಬೇಕಾಗಿದೆ" ಎಂದಿದ್ದಾರೆ. ಈ ಕುರಿತು ಸಾಮಾಜಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News