×
Ad

ʼಭದ್ರತಾ ಲೋಪ' ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು, ಸಚಿವರಿಂದ ಪ್ರಧಾನಿ ದೀರ್ಘಾಯುಷ್ಯಕ್ಕಾಗಿ ಹೋಮ, ಹವನ

Update: 2022-01-08 14:41 IST
 Biplab Kumar Deb and Himanta Biswa Sarma via Twitter

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್‍ಗೆ ಭೇಟಿ ನೀಡಿದ ವೇಳೆ ಉಂಟಾದ ʼಭದ್ರತಾ ಲೋಪ'ದ ಹಿನ್ನೆಲೆಯಲ್ಲಿ ಹಲವು ಸಚಿವರುಗಳು ಹಾಗೂ ಬಿಜೆಪಿ ನಾಯಕರು ಪ್ರಧಾನಿಯ ದೀರ್ಘಾಯುಷ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗುರುವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು  ಭುಬನೇಶ್ವರದ ಶ್ರೀ ಲಿಂಗರಾಜ ದೇವಸ್ಥಾನಕ್ಕೆ  ಇತರ ಬಿಜೆಪಿ ನಾಯಕರೊಂದಿಗೆ ತೆರಳಿ ಪ್ರಧಾನಿಗಾಗಿ ಪ್ರಾರ್ಥಿಸಿದ್ದಾರೆ. ದೇವಸ್ಥಾನದಲ್ಲಿ ಆರತಿ ಸಲ್ಲಿಸುತ್ತಿರುವ ವೀಡಿಯೋವನ್ನೂ ಪೋಸ್ಟ್ ಮಾಡಿದ ಅವರು "ಪ್ರಧಾನಿಯ ದೀರ್ಘಾಯುಷ್ಯಕ್ಕಾಗಿ" ಎಂದು ಬರೆದಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರೂ ಒಡಿಶಾದ ವಿವಿಧ ದೇವಳಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ತಾವು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

"ಅವರು ದೇಶದ ಘನತೆ, ಗೌರವವನ್ನು ಜಗತ್ತಿನಾದ್ಯಂತ ಹೆಚ್ಚಿಸಿದ್ದಾರೆ, ನಾವು ಸಮೃದ್ಧ ಭಾರತ ನಿರ್ಮಿಸುತ್ತಿದ್ದೇವೆ" ಎಂದೂ ಚೌಹಾಣ್ ಬರೆದಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರ್ಮ ಅವರು ಪ್ರಧಾನಿಯ ದೀರ್ಘಾಯುಷ್ಯಕ್ಕಾಗಿ ಮಹಾಮೃತ್ಯುಂಜಯ ಹೋಮವನ್ನು ಗುವಹಾಟಿಯ ಉಗ್ರತಾರ ದೇವಳದಲ್ಲಿ ನಡೆಸಿ ಈ ಕುರಿತಾದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ತ್ರಿಪುರಾ ಸೀಎಂ ಬಿಪ್ಲಬ್ ಕುಮಾರ್ ದೇಬ್ ಕೂಡ ಸಿಫಜಿಲ ಕಿಲ್ಲೆಯ ಕಮಲಾಸಾಗರ್ ಕಾಲಿಬಾರಿ ಎಂಬಲ್ಲಿ ಹವನ ಸಲ್ಲಿಸಿದ್ದಾರೆ. ತ್ರಿಪುರಾದ 60 ಕ್ಷೇತ್ರಗಳಲ್ಲೂ ಪೂಜೆಗಳನ್ನು ಸಲ್ಲಿಸಲಾಗಿದೆ.

ಕೇಂದ್ರ ಸಚಿವರುಗಳಾದ ಮನ್ಸುಖ್ ಮಾಂಡವಿಯ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸಹಿತ ಹಲವು ಬಿಜೆಪಿ ನಾಯಕರು ಟ್ವೀಟ್ ಮಾಡಿ ಪ್ರಧಾನಿಯ ಸುರಕ್ಷತೆಗಾಗಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News