×
Ad

ಬ್ರಿಟನ್ ರಾಣಿಗೆ ಭದ್ರತಾ ಆತಂಕ: ವಿಂಡ್ಸರ್ ಅರಮನೆ ಮೇಲೆ ವಿಮಾನ, ಡ್ರೋಣ್ ಹಾರಾಟ ನಿಷೇಧ

Update: 2022-01-08 21:31 IST
 ಬ್ರಿಟನ್ ರಾಣಿ ಎಲಿಝಬೆತ್

ಲಂಡನ್,ಜ.8: ಬ್ರಿಟನ್ ರಾಣಿ ಎರಡನೆ ಎಲಿಝಬೆತ್ ಅವರಿಗೆ ಭದ್ರತೆಯ ಬಗ್ಗೆ ಆತಂಕಗಳು ಉಂಟಾಗಿರುವ ನಡುವೆಯೇ ವಿಂಡ್ಸರ್ ಅರಮನೆಯ ಮೇಲಿನ ವಾಯುಪ್ರದೇಶವನ್ನು ಹಾರಾಟ ನಿಷೇಧ ವಲಯವೆಂದು ಬ್ರಿಟನ್‌ನ ನಾಗರಿಕ ವಾಯುಯಾನ ಅಧಿಕಾರಿಗಳು ಶುಕ್ರವಾರ ಘೋಷಿಸಿದ್ದಾರೆ. ಜನವರಿ 27ರಿಂದ ವಿಂಡ್ಸರ್ ಅರಮನೆಯ ಮೇಲಿನಿಂದ 2500 ಅಡಿ ಎತ್ತರದೊಳಗೆ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿದೆಯೆಂದು ‘ ದಿ ಸನ್’ ಸುದ್ದಿಸಂಸ್ಥೆ ವರದಿ ಮಾಡಿದೆ. ಹಾರಾಟ ನಿಷೇಧದ ಎಚ್ಚರಿಕೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣವಾದ ಕ್ರಮವನ್ನು ಕೈಗೊಳ್ಳುವುದಾಗಿ  ಬ್ರಿಟನ್ ರಾಣಿ ಎರಡನೆ ಎಲಿಝಬೆತ್ ಎಚ್ಚರಿಕೆ ನೀಡಿದ್ದಾರೆ.

ಬ್ರಿಟನ್ ರಾಣಿ ಎರಡನೆ ಎಲಿಝಬೆತ್ ಅವರ ಕೊಲೆಗೈಯಲು ವಿಂಡ್ಸರ್ ಅರಮನೆಯನ್ನು ಪ್ರವೇಶಿಸಸಲು ಯತ್ನಿಸಿದ ಆರೋಪದಲ್ಲಿ ಡಿಸೆಂಬರ್ 25ರಂದು ಭಾರತೀಯ ಮೂಲದ ಜಸ್ವಂತ್ ಸಿನ್‌ಶಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. 1919ರಲ್ಲಿ ಭಾರತದ ಜಲಿಯಾನ್‌ವಾಲಾಭಾಗ್‌ನಲ್ಲಿ ಆಗಿ ಬ್ರಿಟಿಶ್ ಆಡಳಿತವು ನಡೆಸಿದ ಭಾರತೀಯ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಬ್ರಿಟಿಶ್ ರಾಣಿಯನ್ನು ತಾನು ಕೊಲೆಗೈಯಲು ಬಯಸಿದ್ದಾಗಿ ಜಸ್ವಂತ್ ವಿಚಾರಣೆಯ ವೇಳೆ ತಿಳಿಸಿದ್ದನು.

ಕೋವಿಡ್19 ಹಾವಳಿ ಆರಂಭಗೊಂಡಾಗಿನಿಂದ ಬ್ರಿಟಿಶ್ ರಾಣಿ ಅರು ವಿಂಡ್ಸರ್ ಅರಮನೆಯಲ್ಲಿರುವ ತನ್ನ ಖಾಸಗಿ ವಸತಿಗೃಹದಲ್ಲಿ ವಾಸ್ತವ್ಯವಿದ್ದಾರೆ.

ಬ್ರಿಟನ್ ರಾಣಿಯ ಹತ್ಯೆ ಸಂಚಿನ ಆರೋ ಎದುರಿಸುತ್ತಿರುವ ಜಸ್ವಂತ್ ಗೆ ಪ್ರಸಕ್ತ ಮಾನಸಿಕ ಸ್ವಾಸ್ಥಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News