ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ನಡುವೆ ಗಂಗಾಸಾಗರ ಮೇಳ ಆರಂಭ

Update: 2022-01-08 18:02 GMT

ಗಾಂಧಿನಗರ, ಜ. 8: ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಪಶ್ಚಿಮಬಂಗಾಳದಲ್ಲಿ ನಡೆಯುವ ದಶಕಗಳ ಇತಿಹಾಸ ಇರುವ ಗಂಗಾಸಾಗರ ಮೇಳ ಶನಿವಾರ ಆರಂಭವಾಗಿದ್ದು, ಜನವರಿ 16ರ ವರೆಗೆ ನಡೆಯಲಿದೆ. ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾಸಾಗರ ಮೇಳವನ್ನು ನಿಷೇಧಿಸುವಂತೆ ಕೂಗು ಕೇಳಿ ಬರುತ್ತಿರುವ ಹೊರತಾಗಿಯೂ ಮೇಳ ನಡೆಯಲಿದೆ.

ಕೋವಿಡ್ ನಿಯಂತ್ರಿಸಲು ಅಗತ್ಯದ ಕ್ರಮಗಳನ್ನು ತೆಗೆದುಕೊಂಡ ಬಳಿಕ ಕಾರ್ಯಕ್ರಮ ನಡೆಸುವಂತೆ ತೃಣಮೂಲ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ಕೋಲ್ಕತ್ತಾ ಉಚ್ಚ ನ್ಯಾಯಾಲಯ ಶುಕ್ರವಾರ ಸೂಚಿಸಿದೆ. ಮೇಳದ ಆವರಣದಲ್ಲಿ 2022 ಜನವರಿ 2ರಂದು ರಾಜ್ಯ ಸರಕಾರ ನೀಡಿದ ಆದೇಶವನ್ನು ಸಶಕ್ತವಾಗಿ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾತ್ಸವ ಹಾಗೂ ನ್ಯಾಯಮೂರ್ತಿ ಕೇಸಂಗ್ ಡೋಮಾ ಭುಟಿಯಾ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ನಿರ್ದೇಶಿಸಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭೆಯ ಸಂದರ್ಭ 50ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಸರಕಾರ ಈ ಹಿಂದೆ ಆದೇಶ ನೀಡಿತ್ತು. ಈ ವರ್ಷ ಗಂಗಾಸಾಗರ ಮೇಳವನ್ನು ನಿಷೇಧಿಸುವಂತೆ ಕೋರಿ ಡಾ. ಅರವಿಂದನ್ ಮಂಡಲ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಪೀಠ ವಿಚಾರಣೆ ನಡೆಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News