×
Ad

ಕೋವಿಡ್‌ ಭೀತಿ: ಉನ್ನತ ಮಟ್ಟದ ಸಭೆ ಕರೆದ ಪ್ರಧಾನಿ ಮೋದಿ

Update: 2022-01-09 15:30 IST
file photo 

ಹೊಸದಿಲ್ಲಿ: ದೇಶದ ಕೋವಿಡ್ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 4.30 ಕ್ಕೆ ಉನ್ನತ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

 ದೇಶದಲ್ಲಿ ಒಮೈಕ್ರಾನ್‌ ರೂಪಾಂತರಿ ಹಾಗೂ ಕರೋನಾ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದೆನಿಸಿದೆ. ಕಳೆದ ಕೆಲವುದಿನಗಳಿಂದ ದೇಶಲದಲ್ಲಿ ಕರೋನಾ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 1.6 ಲಕ್ಷ ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದೆ.

ಕೋವಿಡ್‌ ಕುರಿತಂತೆ ಪ್ರಧಾನಿ ಮೋದಿ ಕೊನೆ ಬಾರಿ ಡಿಸೆಂಬರ್‌ 24 ಕ್ಕೆ ಸಭೆ ನಡೆಸಿದ್ದು, ಎಚ್ಚರಿಕೆ ಇರುವಂತೆ ಕರೆ ನೀಡಿದ್ದರು. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟ ಇನ್ನೂ ಮುಕ್ತಾಯಗೊಂಡಿಲ್ಲ, ಎಚ್ಚರಿಕೆಯಿಂದ ಇರುವುದು ಅನಿವಾರ್ಯ ಎಂದು ಕರೆ ನೀಡಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News