ಗೋವಾ ವಿಧಾನ ಸಭೆ ಚುನಾವಣೆ: ಆಪ್ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

Update: 2022-01-09 20:00 GMT

ಹೊಸದಿಲ್ಲಿ: ಈ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಗೋವಾ ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಆಮ್ ಆದ್ಮಿ ಪಕ್ಷ (ಎಎಪಿ) ರವಿವಾರ ಬಿಡುಗಡೆ ಮಾಡಿದೆ.

‘‘ಇಂದು ಎಎಪಿ ಗೋವಾ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾವು ಗೋವಾದಲ್ಲಿ ಉತ್ತಮ ಆಡಳಿತ ತರಲು ಹಾಗೂ ಜನರಿಗಾಗಿ ಕಾರ್ಯ ನಿರ್ವಹಿಸಲು ಬದ್ಧರಾಗಿದ್ದೇವೆ’’ ಎಂದು ಎಎಪಿ ಗೋವಾ ಘಟಕದ ಸಂಚಾಲಕ ರಾಹುಲ್ ಮಂಬ್ರೆ ಅವರ ಟ್ವೀಟ್ ಹೇಳಿದೆ.

ರಾಮರಾವ್ ವಾಘ್, ಸುದೇಶ್ ಮಾಯೇಕರ್, ಸಿಸಿಲಿ ರೋಡ್ರಿಗಸ್, ರಾಜೇಶ್ ಕಲಂಗುಟ್ಕರ್, ಪ್ರಶಾಂತ್ ನಾಯಕ್, ರಾಹುಲ್ ಮಂಬ್ರೆ, ಕ್ರೂಝ್ ಸಿಲ್ವಾ, ಅನೂಪ್ ಕುಡ್ತರ್ಕರ್, ಅನಿಲ್ ಗಾಂವ್ಕರ್ ಹಾಗೂ ಸಂದೇಶ್ ತೇಲೇಕರ್ ಮೊದಲಾದ 10 ಅಭ್ಯರ್ಥಿಗಳು ಮೊದಲ ಪಟ್ಟಿಯಲ್ಲಿ ಇದ್ದಾರೆ.

ಪಂಚರಾಜ್ಯಗಳ ಚುನಾವಣೆಯನ್ನು ಫೆಬ್ರವರಿ 10ರಿಂದ 7 ಹಂತಗಳಲ್ಲಿ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News