ಶಿರ್ವ: ಮದುವೆ ವಾಹನದಂತೆ ಸಿಂಗರಿಸಿದ ಕಾರಿನಲ್ಲಿ ಜಾನುವಾರು ಸಾಗಾಟ ಪತ್ತೆ

Update: 2022-01-12 16:16 GMT

ಶಿರ್ವ, ಜ.12: ಮದುವೆ ವಾಹನದಂತೆ ಸಿಂಗರಿಸಿದ ಕಾರು ಹಾಗೂ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15 ಜಾನುವಾರು ಗಳನ್ನು ಪೊಲೀಸರು ರಕ್ಷಿಸಿರುವ ಘಟನೆ ಜ.12ರಂದು ಮುಂಜಾನೆ ಎಡ್ಮೇರು ಬಳಿ ನಡೆದಿದೆ.

ಮೂಡುಬೆಳ್ಳೆ ಗ್ರಾಪಂ ವ್ಯಾಪ್ತಿಯ ಅಂಗಾರಕಟ್ಟೆಯಿಂದ ಎಡ್ಮೇರು ಕಡೆಗೆ ಬರುತ್ತಿದ್ದ ವಾಹನವನ್ನು ಪೊಲೀಸರು ಕೋಚರಪ್ಪು ಸೇತುವೆ ಬಳಿ ತಡೆದರು. ಪೊಲೀಸರನ್ನು ಕಂಡ ಎರಡು ವಾಹನಗಳಲ್ಲಿದ್ದ ಒಟ್ಟು ಎಂಟು ಮಂದಿ ವಾಹನಗಳನ್ನು ಬಿಟ್ಟು ಪರಾರಿಯಾದರು ಎಂದು ತಿಳಿದುಬಂದಿದೆ.

ಬಳಿಕ ವಾಹನಗಳನ್ನು ಪರಿಶೀಲಿಸಿದಾಗ ಪಿಕ್‌ಅಪ್ ವಾಹನದಲ್ಲಿ 13 ಮತ್ತು ಕಾರಿನಲ್ಲಿ ಎರಡು ಜಾನುವಾರುಗಳು ಕಂಡುಬಂದವು. ಇದರಲ್ಲಿ ಎರಡು ಗಂಡು ಕರುಗಳು ಮೃತಪಟ್ಟಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News