×
Ad

ಫ್ಯಾಕ್ಟ್ ಚೆಕ್: ಇರಾನ್ ನಲ್ಲಿ ವಿಮಾನ ಪತನ ಎಂಬ ವೈರಲ್ ವಿಡಿಯೋದ ವಾಸ್ತವವೇನು?

Update: 2022-01-12 23:21 IST

ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಇರಾನ್‌ನ ಏರ್ಪೋರ್ಟ್‌ನಲ್ಲಿ ಇಂಡೋನೇಷಿಯಾ ರಾಷ್ಟ್ರೀಯ ಏರ್ಲೈನ್‌ ಗರುಡಾ ಇಂಡೋನೇಷಿಯಾ ವಿಮಾನವೊಂದು ಪತನವಾಗಿದೆಯೆಂಬ ವಿಡಿಯೋ ವೈರಲ್‌ ಆಗುತ್ತಿದೆ. 

ಇರಾನ್‌ನ ಮಶ್ಶದ್‌ ವಿಮಾನ ನಿಲ್ದಾಣದಲ್ಲಿ ಈ ವಿಮಾನ ಅಪಘಾತಕ್ಕೀಡಾಗಿದೆಯೆಂಬ ಒಕ್ಕಣೆಯೊಂದಿಗೆ ಹರಿದಾಡುತ್ತಿರುವ ವಿಡಿಯೋದ ವಾಸ್ತವ ಸ್ಥಿತಿ ಬೇರೆಯೇ ಇದೆ. ವೈರಲ್‌ ಆಗುತ್ತಿರುವ ವಿಡಿಯೋ ನಕಲಿಯೆಂದು The̤Quint ಮಾಡಿರುವ ಫ್ಯಾಕ್ಟ್‌ ಚೆಕ್‌ನಲ್ಲಿ ತಿಳಿದು ಬಂದಿದೆ. 

ಯೂಟ್ಯೂಬ್‌ನ  'Bopbibunʼ ಎಂಬ ಚಾನೆಲ್‌ ಒಂದರಲ್ಲಿ ಈಗ ವೈರಲ್‌ ಆಗುತ್ತಿರುವ ವಿಡಿಯೋ 2020ರ ಮೇ 2 ರಲ್ಲಿ ಪೋಸ್ಟ್‌ ಆಗಿದೆ. ಅದರ ಎಡಿಟೆಡ್‌ ವಿಡಿಯೋವನ್ನು ಇರಾನ್‌ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಘಾತವೆಂದು ಈಗ ಬಿತ್ತರಿಸಲಾಗುತ್ತಿದೆಯೆಂದು ಕ್ವಿಂಟ್‌ ವರದಿಯಲ್ಲಿ ಹೇಳಿದೆ.

ಇದು ಕಂಪ್ಯೂಟರ್‌ ಸಹಾಯದಿಂದ ತಯಾರಿಸಿದ ಅನಿಮೇಟೆಡ್‌ ಕಾಲ್ಪನಿಕ ವೀಡಿಯೊ ಆಗಿದ್ದು, ಇದು ನಿಜವಾಗಿ ನಡೆದ ಅಪಘಾತವಲ್ಲ ಎಂದು AFP ಸತ್ಯಶೋಧನಾ ವರದಿ ಹೇಳಿದೆ. ಎರಡು ವೀಡಿಯೊಗಳನ್ನು ಎಡಿಟಿಂಗ್‌ ಟೂಲ್‌ ಗಳನ್ನು ಬಳಸಿ ಸಮ್ಮಿಶ್ರಗೊಳಿಸಲಾಗಿದೆ. ವೀಡಿಯೊದ ಎರಡನೇ ಭಾಗವು ಕ್ಯಾಸ್ಪಿಯನ್ ಏರ್‌ಲೈನ್ಸ್ ವಿಮಾನವಾಗಿದ್ದು, ಇರಾನ್‌ನ ಇಸ್ಫಹಾನ್‌ನಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ಟಚ್‌ ಡೌನ್‌ ವೇಳೆ ಗೇರ್‌ ಗಳು ಕುಸಿದ ಕಾರಣ ವಿಮಾನವು ರನ್‌ ವೇಯಿಂದ ಹೊರ ಜಾರಿತ್ತು. ಈ ಘಟನೆ ಜನವರಿ 6ರಂದು ನಡೆದಿತ್ತು ಎನ್ನಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News