ಉತ್ತರ ಪ್ರದೇಶ : ಕಾಂಗ್ರೆಸ್ ಸಂಸದ ಅವತಾರ್ ಸಿಂಗ್ ಭಡಾನ ಆರ್‌ಎಲ್‌ಡಿಗೆ ಸೇರ್ಪಡೆ

Update: 2022-01-12 18:02 GMT
Photo : Twitter.com/@AvtarBhadanaMP

ನೋಯ್ಡ, ಜ. 12: ಉತ್ತರಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಗೆ ಮುನ್ನ ಬುಧವಾರ ಕಾಂಗ್ರೆಸ್‌ನೊಂದಿಗಿನ ನಂಟು ಕಡಿದುಕೊಂಡಿರುವ ಅವತಾರ್ ಸಿಂಗ್ ಭಡಾನ ಅವರು ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ)ಕ್ಕೆ ಸೇರ್ಪಡೆಯಾಗಿದ್ದಾರೆ. ಹರ್ಯಾಣದ ಫರೀದಾಬಾದ್‌ನಿಂದ ನಾಲ್ಕು ಬಾರಿ ಲೋಕಸಭಾ ಸಂಸದರಾಗಿದ್ದ ಭಡಾನ ಅವರನ್ನು ಆರ್‌ಎಲ್‌ಡಿ ಉತ್ತರಪ್ರದೇಶದ ಗೌತಮ ಬುದ್ಧ ನಗರ ಜಿಲ್ಲೆಯ ಜೇವರ್ ವಿಧಾನ ಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ ಪಕ್ಷದ ಮೂಲಗಳು ತಿಳಿಸಿವೆ.

64ರ ಹರೆಯದ ಭಡಾನ ಅವರು ತನ್ನ ಪಕ್ಷ ಆರ್‌ಎಲ್‌ಡಿಗೆ ಸೇರಿರುವುದನ್ನು ಚೌಧರಿ ಅವರು ಬುಧವಾರ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಅವರೊಂದಿಗಿರುವ ಫೊಟೋ ಹಂಚಿಕೊಂಡಿದ್ದಾರೆ. ಸಭೆ ಹೊಸದಿಲ್ಲಿಯಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಟ್ವಿಟ್ಟರ್ ಪೋಸ್ಟ್ ಅನ್ನು ಭಡಾನ ಅವರು ಮರು ಪೋಸ್ಟ್ ಮಾಡಿದ್ದಾರೆ. ಮೂರು ದಶಕಗಳ ಹಿಂದೆ ಕಾಂಗ್ರೆಸ್‌ನ ಹಯಾರ್ಣ ಘಟಕಕ್ಕೆ ಭಡಾನ ಅವರು ಸೇರಿದ್ದರು. ಅನಂತರ ಅವರು 1988ರಲ್ಲಿ ರಾಜ್ಯ ಸಂಪುಟದ ಸಚಿವರಾಗಿದ್ದರು. 2009ರಲ್ಲಿ ಅವರು ನಾಲ್ಕನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News