ಒಮೈಕ್ರಾನ್ ಪ್ರತಿಯೊಬ್ಬರಿಗೂ ಬಾಧಿಸುತ್ತದೆ, ಬೂಸ್ಟರ್‌ಗಳು ಅದನ್ನು ನಿಲ್ಲಿಸುವುದಿಲ್ಲ: ಪ್ರಮುಖ ವೈದ್ಯಕೀಯ ತಜ್ಞ

Update: 2022-01-13 11:10 GMT

ಹೊಸದಿಲ್ಲಿ: ಕೋವಿಡ್ -19 ರ ಒಮೈಕ್ರಾನ್ ರೂಪಾಂತರವು "ಬಹುತೇಕ ತಡೆಯಲಾಗದು" ಹಾಗೂ ಅಂತಿಮವಾಗಿ ಎಲ್ಲರೂ ಇದರಿಂದ ಸೋಂಕಿಗೆ ಒಳಗಾಗುತ್ತಾರೆ ಎಂದು ಪ್ರಮುಖ ಸರಕಾರಿ ವೈದ್ಯಕೀಯ ತಜ್ಞ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಬೂಸ್ಟರ್ ಲಸಿಕೆ ಡೋಸ್‌ಗಳು ವೈರಸ್‌ನ ತ್ವರಿತ ಹರಡುವಿಕೆಯನ್ನು ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದರು.

''ಇದು ಯಾವುದೇ ವ್ಯತ್ಯಾಸ ಉಂಟು ಮಾಡದು. ಸೋಂಕು ಸಂಭವಿಸುತ್ತದೆ. ಪ್ರಪಂಚದಾದ್ಯಂತ ಇದು ಸಂಭವಿಸಿದೆ'' ಎಂದು ಅವರು ಬೂಸ್ಟರ್ ಡೋಸ್‌ಗಳ ಬಗ್ಗೆ ಹೇಳಿದರು.

ಕೋವಿಡ್ "ಇನ್ನು ಮುಂದೆ ಭಯಾನಕ ರೋಗವಲ್ಲ" ಎಂದು ಒತ್ತಿಹೇಳಿದ ಅವರು  ಹೊಸ ತಳಿ ಸೌಮ್ಯವಾಗಿದೆ ಮತ್ತು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದು ನಾವು ನಿಭಾಯಿಸಬಹುದಾದ ಕಾಯಿಲೆಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆಯ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಜೈಪ್ರಕಾಶ್ ಮುಳಿಯಿಲ್ ಹೇಳಿದರು.

''...ನಾವು ವಿಭಿನ್ನ ವೈರಸ್‌ನೊಂದಿಗೆ ವ್ಯವಹರಿಸುತ್ತಿದ್ದೇವೆ. ಇದು ಡೆಲ್ಟಾಕ್ಕಿಂತ ಹೆಚ್ಚು ಸೌಮ್ಯವಾಗಿದೆ, ನಿಮಗೆಲ್ಲರಿಗೂ ತಿಳಿದಿರುವಂತೆ, ಇದು ಪ್ರಾಯೋಗಿಕವಾಗಿ ತಡೆಯಲಾಗದು,'' ಎಂದು ಡಾ.ಜೈಪ್ರಕಾಶ್ ಮುಳಿಯಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News