ʼಅವಧಿಗಿಂತ ಮುಂಚೆಯೇ ವೃದ್ಧಾಪ್ಯʼ ರೋಗದಿಂದ ಬಳಲುತ್ತಿದ್ದ 15ರ ಹರೆಯದ ಯೂಟ್ಯೂಬ್‌ ತಾರೆ ಬಾಲಕಿ ನಿಧನ

Update: 2022-01-15 08:17 GMT
Photo: Instagram

ನ್ಯೂಯಾರ್ಕ್:‌ ಬೆಂಜಮಿನ್‌ ಬಟನ್‌ ಕಾಯಿಲೆ ಎಂದು ಕರೆಯಲ್ಪಡುವ ʼಬೇಗನೇ ವಯಸ್ಸಾಗುವʼ ಅಪರೂಪದ ರೋಗದಿಂದ ಬಳಲುತ್ತಿದ್ದ ಖ್ಯಾತ ಯೂಟ್ಯೂಬರ್‌ ಅಡಾಲಿಯಾ ರೋಸ್‌ ವಿಲಿಯಮ್ಸ್‌ ತಮ್ಮ 15ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಮೂರು ತಿಂಗಳ ಮಗುವಾಗಿದ್ದ ವೇಳೆ ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ ರೋಗಪೀಡಿತರಾಗಿದ್ದರು.

"ಜನವರಿ 12ರಂದು ಸಂಜೆ 7 ಗಂಟೆಗೆ ವಿಲಿಯಮ್ಸ್‌ ಪ್ರಪಂಚದಿಂದ ಮುಕ್ತಳಾಗಿದ್ದಾಳೆ" ಎಂದು ಅವರ ಅಧಿಕೃತ ಇನ್‌ ಸ್ಟಾಗ್ರಾಂ ಖಾತೆಯಲ್ಲಿ ಘೋಷಣೆ ಮಾಡಲಾಗಿದೆ. ಈ ಪೋಸ್ಟ್ ಗೆ 8 ಲಕ್ಷಕ್ಕೂ ಅಧಿಕ ರಿಯಾಕ್ಷನ್‌ ಗಳು ಬಂದಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಕಮೆಂಟ್‌ ಗಳು ಹರಿದು ಬಂದಿವೆ.

"ಇದರೊಳಗೆ ಆಕೆ ಸದ್ದಿಲ್ಲದೇ ಬಂದಳು ಮತ್ತು ಸದ್ದಿಲ್ಲದೇ ತೆರಳಿದ್ದಾಳೆ. ಆದರೆ ಅವಳ ಜೀವನ ಇನ್ನೂ ತುಂಬಾ ದೂರವಿತ್ತು. ಅವಳಿಗೆ ಲಕ್ಷಾಂತರ ಮಂದಿಯನ್ನು ಮುಟ್ಟಲು ಸಾಧ್ಯವಾಯಿತು. ಅವಳನ್ನು ಅರಿತಿರುವ ಪ್ರತಿಯೊಬ್ಬರಲ್ಲೂ ಆಕೆ ಮುದ್ರೆಯೊಂದನ್ನು ಒತ್ತಿದ್ದಾಳೆ. ಅವಳು ಇನ್ನು ಮುಂದೆ ನೋವಿನಿಂದ ಬಳಲುವುದಿಲ್ಲ ಮತ್ತು ಈಗ ಅವಳು ಇಷ್ಟಪಡುವ ಎಲ್ಲಾ ಸಂಗೀತಗಳಿಗೂ ಆಕೆ ನೃತ್ಯ ಮಾಡುತ್ತಿದ್ದಾಳೆ" ಎಂದು ಆಕೆಯ ಕುಟುಂಬ ಪೋಸ್ಟ್‌ ನಲ್ಲಿ ತಿಳಿಸಿದೆ.

ಅಕಾಲಿಕ ವಯೋಸಹಜತೆಯೊಂದಿಗೆ, ಇತರ ರೋಗಲಕ್ಷಣಗಳಾದ ಕುಬ್ಜತೆ, ದೇಹದಲ್ಲಿನ ಕೊಬ್ಬಿನ ಕೊರತೆ ಮತ್ತು ಸ್ನಾಯು, ಕೀಲುಗಳ ಬಿಗಿತದಿಂದಲೂ ಆಕೆ ಬಳಲುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News