×
Ad

"ನಿನ್ನೆಯಿಂದ ಅಮ್ಮ ಅಡುಗೆಮನೆಯಲ್ಲಿ ಕೆಲಸದಲ್ಲಿದ್ದಾರೆ, ಎಲ್ಲರೂ ಮನೆಗೆ ತೆರಳಿ: ಅತಿಥಿಗಳನ್ನು ಗದರಿಸಿದ ಪುಟ್ಟ ಬಾಲಕ

Update: 2022-01-15 14:54 IST

ಮನೆಗೆ ಅತಿಥಿಗಳು ಆಗಮಿಸಿದ ವೇಳೆ ತಾಯಂದಿರು ಅಡಿಗೆ ಮನೆಯಲ್ಲಿ ಆಹಾರಗಳನ್ನು ತಯಾರಿಸಲು ನಿರತರಾಗುವುದು ವಾಡಿಕೆ. ಆದರೆ ತಾಯಿಯು ಅಡುಗೆ ಮನೆಯಲ್ಲಿ ಕೆಲಸ ಮಾಡುವುದನ್ನು ಕಂಡು ಮರುಗಿದ ಪುಟ್ಟ ಬಾಲಕನೋರ್ವ ಅತಿಥಿಗಳನ್ನು ಗದರಿಸಿ, "ನೀವು ಮನೆಗೆ ಹೋಗಿ" ಎನ್ನುತ್ತಿರುವ ವೀಡಿಯೊವೊಂದು ಟ್ವಿಟರ್‌ ನಲ್ಲಿ ವೈರಲ್‌ ಆಗಿದೆ.

ಪತಿಯ ಸ್ನೇಹಿತರು ಮನೆಗೆ ಬಂದ ಸಂದರ್ಭದಲ್ಲಿ ಬಾಲಕನ ತಾಯಿ ಅಡುಗೆಮನೆಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಒಳಗಿನಿಂದ ಆಹಾರವನ್ನು ತಂದ ಬಾಲಕ, ತಾಯಿ ಕೆಲಸ ಮಾಡುವುದು ಮುಂದುವರಿಸುತ್ತಿರುವುದನ್ನು ನೋಡಲಾಗದೇ ಅತಿಥಿಗಳನ್ನು ಗದಿರಿಸಿದ್ದಾನೆ. ಈ ವೇಳೆ ಅಲ್ಲಿದ್ದ ವ್ಯಕ್ತಿಯೋರ್ವ ಈ ವೀಡಿಯೋವನ್ನು ಸೆರೆ ಹಿಡಿದ್ದಾರೆ.

ತನ್ನ ಸಹೋದರನೊಂದಿಗೆ ಸೇರಿ ಆಹಾರವನ್ನು ತಂದ ಬಾಲಕ ಮೊದಲು, "ಇಲ್ಲಿ ಅತಿಥಿಗಳು ಯಾರು?" ಎಂದು ಪ್ರಶ್ನಿಸುತ್ತಾನೆ. ಈ ವೇಳೆ ಅಲ್ಲಿದ್ದ ವ್ಯಕ್ತಿಯೋರ್ವ ನಾನೇ ಎಂದು ಉತ್ತರಿಸುತ್ತಾನೆ. ಈ ವೇಳೆ ಕೋಪಗೊಂಡ ಬಾಲಕ, "ನಿಮಗೆ ನಮ್ಮ ಮನೆಗೆ ಸ್ವಾಗತವಿಲ್ಲ" ಎಂದಾಗ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿ "ಯಾಕೆ?" ಎಂದು ಮರುಪ್ರಶ್ನಿಸುತ್ತಾನೆ. ಕೂಡಲೇ ಬಾಲಕ ಕೋಪಗೊಂಡು, "ನನ್ನ ತಾಯಿ ನಿನ್ನೆಯಿಂದ ಅಡುಗೆ ಮನೆಯಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಇಲ್ಲಿಟ್ಟ ಆಹಾರವನ್ನು ತಿಂದು ಸೀದಾ ಮನೆಗೆ ಹೋಗಿ" ಎಂದಾಗ ಎಲ್ಲರೂ ಗೊಳ್ಳೆಂದು ನಗುತ್ತಾರೆ. ಈ ವೀಡಿಯೊವನ್ನು ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳೊಳಗಡೆ ವೀಡಿಯೊ 2.6 ಮಿಲಿಯನ್‌ ಗಿಂತಲೂ ಹೆಚ್ಚಿನ ವೀಕ್ಷಣೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News