ಟೆಸ್ಟ್ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ ನಿರ್ಧಾರ ವೈಯಕ್ತಿಕ: ಸೌರವ್ ಗಂಗುಲಿ

Update: 2022-01-16 14:11 GMT

ಹೊಸದಿಲ್ಲಿ: "ಟೆಸ್ಟ್ ನಾಯಕತ್ವ ತ್ಯಜಿಸುವ ವಿರಾಟ್ ಕೊಹ್ಲಿ ನಿರ್ಧಾರ ವೈಯಕ್ತಿಕ. ಕೊಹ್ಲಿ ಅವರ ನಿರ್ಧಾರವನ್ನು ಕ್ರಿಕೆಟ್ ಮಂಡಳಿಯು ಗೌರವಿಸುತ್ತದೆ'' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಪ್ರತಿಕ್ರಿಯಿಸಿದರು.

ಈ ವಾರ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಸೋತ ಬಳಿಕ ವಿರಾಟ್ ಕೊಹ್ಲಿ ಶನಿವಾರ ಟೆಸ್ಟ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಯುಎಇನಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ನಲ್ಲಿ ಭಾರತದ ಅಭಿಯಾನದ ಬಳಿಕ ಕೊಹ್ಲಿ ಟಿ-20 ನಾಯಕತ್ವವನ್ನು ತ್ಯಜಿಸಿದ್ದರು.

 ಮಾಜಿ ಭಾರತ ನಾಯಕ ಗಂಗುಲಿ ಟ್ವಿಟರ್ ನಲ್ಲಿ ಕೊಹ್ಲಿಯವರನ್ನು ಶ್ಲಾಘಿಸಿದ್ದಾರೆ.  ಪ್ರಸ್ತುತ ತಂಡವನ್ನು ಮುನ್ನಡೆಸುವಲ್ಲಿ ಸ್ಟಾರ್ ಬ್ಯಾಟರ್ ಕೊಹ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಹೇಳಿದ್ದಾರೆ.

"ವಿರಾಟ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ಆಟದ ಎಲ್ಲಾ ಸ್ವರೂಪಗಳಲ್ಲಿ ಕ್ಷಿಪ್ರ ದಾಪುಗಾಲು ಹಾಕಿದೆ. ಅವರ ನಿರ್ಧಾರ ವೈಯಕ್ತಿಕ. ಬಿಸಿಸಿಐ ಅವರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತದೆ. ಈ ತಂಡವನ್ನು ಭವಿಷ್ಯದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಅವರ ಪ್ರಮುಖ ಸದಸ್ಯನಾಗಲಿದ್ದಾರೆ " ಎಂದು ಗಂಗುಲಿ ಟ್ವೀಟ್ ಮಾಡಿದ್ದಾರೆ.

68 ಪಂದ್ಯಗಳಲ್ಲಿ 40 ಗೆಲುವು ದಾಖಲಿಸಿರುವ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನಾಗಿ ಹೊರಹೊಮ್ಮಿದ್ದರು.

ಕೊಹ್ಲಿ ಅವರು ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ (53) ಹಾಗೂ  ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರರಾದ ರಿಕಿ ಪಾಂಟಿಂಗ್ (43) ಮತ್ತು ಸ್ಟೀವ್ ವಾ (41) ನಂತರ ಅತಿ ಹೆಚ್ಚು ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿದ ವಿಶ್ವದ ಟೆಸ್ಟ್ ಕ್ರಿಕೆಟ್ ನಾಯಕರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಅವರ ನಾಯಕತ್ವದಲ್ಲಿ  ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿಮೊತ್ತ ಮೊದಲ ಬಾರಿ ಟೆಸ್ಟ್ ಸರಣಿ ಗೆಲುವು ಸೇರಿದಂತೆ ಹೊಸ ಎತ್ತರವನ್ನು ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News