ಸನ್ಯಾಸಿನಿ ಹೇಳಿಕೆ ಅಸಮಂಜಸ: ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್‌ರನ್ನು ಖುಲಾಸೆಗೊಳಿಸಿದ ಕೋರ್ಟ್‌

Update: 2022-01-16 16:29 GMT

ಕೋಟ್ಟಯಂ: ಕ್ರೈಸ್ತ ಸನ್ಯಾಸಿನಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ಮಾಜಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿರುವ ಕೇರಳದ ವಿಚಾರಣಾ ನ್ಯಾಯಾಲಯ, ಮಹಿಳೆಯ ಹೇಳಿಕೆಯು "ಅಸಮಂಜಸ" ಹಾಗೂ ಇದು ಆಕೆಯ ಹೇಳಿಕೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅಭಿಪ್ರಾಯಪಟ್ಟಿರುವುದಾಗಿ ಪಿಟಿಐ ವರದಿ ಮಾಡಿದೆ.

ಕೊಟ್ಟಯಂನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಫ್ರಾಂಕೋ ಮುಲಕ್ಕಲ್ ಅವರನ್ನು ಖುಲಾಸೆಗೊಳಿಸಿತ್ತು. ತಮ್ಮ 289 ಪುಟಗಳ ತೀರ್ಪಿನಲ್ಲಿ ನ್ಯಾಯಾಧೀಶರು, ತನ್ನ ಮೇಲೆ 13 ಬಾರಿ ಬಲವಂತವಾಗಿ ಅತ್ಯಾಚಾರವೆಸಗಿದ್ದಾರೆ ಎಂಬ ಸನ್ಯಾಸಿನಿ ಹೇಳಿಕೆಯನ್ನು ಅವರ ಏಕಾಂತ ಸಾಕ್ಷ್ಯದ ಆಧಾರದ ಮೇಲೆ ಅವಲಂಬಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಜೂನ್ 2018 ರಲ್ಲಿ ಬಿಷಪ್‌ ವಿರುದ್ಧ ದೂರು ದಾಖಲಿಸಿದ್ದ ಸನ್ಯಾಸಿನಿ, 2014 ಮತ್ತು 2016 ರ ನಡುವೆ ಮುಲಕ್ಕಲ್ ಅವರು  ಜಲಂಧರ್ ಡಯಾಸಿಸ್‌ನ ಬಿಷಪ್ ಆಗಿದ್ದಾಗ ತನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.

ಆದರೆ, ಸನ್ಯಾಸಿನಿ ಆರೋಪವನ್ನು ನಿರಾಕರಿಸಿದ್ದ ಬಿಷಪ್‌, ಸನ್ಯಾಸಿನಿಯ ವಿರುದ್ಧ ಕೇಳಿ ಬಂದ ದೂರಿನ ಬಗ್ಗೆ ತನಿಖೆಗೆ ಆದೇಶಿಸಿದ್ದಕ್ಕಾಗಿ ಸನ್ಯಾಸಿನಿ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಪ್ರತ್ಯಾರೋಪಿಸಿದ್ದರು. ಅದಾಗ್ಯೂ, ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ನಂತರ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News