ಪೆರ್ಮುದೆ: ಸೊತ್ತು ಕಳವುಗೈದಿದ್ದ ಆರೋಪದಲ್ಲಿ ಹೋಂ ನರ್ಸ್ ಸೆರೆ

Update: 2022-01-17 15:48 GMT

ಮಂಗಳೂರು, ಜ.17: ಮನೆಯೊಂದರಲ್ಲಿ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಗಲೇ ಕಳ್ಳತನಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತನನ್ನು ಹಾವೇರಿ ಜಿಲ್ಲೆಯ ಶರಣ ಬಸಪ್ಪ ದ್ಯಾಮಪ್ಪ ದೊಡ್ಡಮನಿ (19) ಎಂದು ಗುರುತಿಸಲಾಗಿದೆ.

ಪೆರ್ಮುದೆ ಗ್ರಾಮದ ಫೆರ್ನಾಂಡಿಸ್ ಕಾಂಪೌಂಡ್‌ನ ಲೂಸಿ ಮರಿಯಾರ ಗಂಡ ಡಿಯೋಕ್ ಫೆರ್ನಾಂಡಿಸ್‌ರ ಆರೋಗ್ಯ ಸ್ಥಿತಿ ಸರಿಯಿಲ್ಲದ ಕಾರಣ ಅವರನ್ನು ನೋಡಿಕೊಳ್ಳಲು ಹಾವೇರಿ ಜಿಲ್ಲೆಯ ಶರಣ ಬಸಪ್ಪ ದ್ಯಾಮಪ್ಪ ದೊಡ್ಡಮನಿಯನ್ನು ಹೋಂ ನರ್ಸ್ ಆಗಿ ಕೆಲಸಕ್ಕೆ ನೇಮಿಸಲಾಗಿತ್ತು. 2021ರ ಡಿಸೆಂಬರ್ 1ರಂದು ಈತ ಡಿಯೋಕ್ ಫೆರ್ನಾಂಡಿಸ್‌ರ ಮನೆಯ ಕಪಾಟಿನಲ್ಲಿದ್ದ ಸುಮಾರು 3,50,000 ರೂ. ಮೌಲ್ಯದ ವಿವಿಧ ಮಾದರಿಯ ಚಿನ್ನಾಭರಣ ಕಳವು ಮಾಡಿಕೊಂಡು ಪರಾರಿಯಾಗಿದ್ದ ಎಂದು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈತನನ್ನು ಸೋಮವಾರ ಬಂಧಿಸಿದ ಪೊಲೀಸರು ಮೂರುವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News