50 ಲಕ್ಷಕ್ಕೂ ಅಧಿಕ ಆರೋಗ್ಯ, ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಬೂಸ್ಟರ್ ಡೋಸ್ ನೀಡಿಕೆ: ಸಚಿವ ಮಾಂಡವೀಯ

Update: 2022-01-18 14:10 GMT

ಹೊಸದಿಲ್ಲಿ,ಜ.18: ಜನವರಿ 10ರಿಂದ 50ಲಕ್ಷಕ್ಕೂ ಅಧಿಕ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷಕ್ಕೂ ಮೇಲಿನ ಹಿರಿಯ ನಾಗರಿಕರಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಯ ಬೂಸ್ಟರ್ ಡೋಸ್‌ಗಳನ್ನು ನೀಡಲಾಗಿದೆ. ಇದು ಇನ್ನೊಂದು ಮೈಲಿಗಲ್ಲಾಗಿದೆ ಎಂದು ಮಂಗಳವಾರ ಟ್ವೀಟಿಸಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು,ಎಲ್ಲ ಅರ್ಹರು ಶೀಘ್ರ ಬೂಸ್ಟರ್ ಡೋಸ್‌ಗಳನ್ನು ಪಡೆದುಕೊಳ್ಳುವಂತೆ ಕೋರಿಕೊಂಡಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 80 ಲ.ಲಸಿಕೆ ಡೋಸ್ಗಳನ್ನು ನೀಡುವುದರೊಂದಿಗೆ ಬೆಳಿಗ್ಗೆ ಏಳು ಗಂಟೆಯವರೆಗಿನ ತಾತ್ಕಾಲಿಕ ವರದಿಗಳಂತೆ ದೇಶದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸ್‌ಗಳ ಸಂಖ್ಯೆ 158.04 ಕೋಟಿಯನ್ನು ದಾಟಿದೆ.
ಒಮೈಕ್ರಾನ್ ಪ್ರಭೇದದಿಂದಾಗಿ ದೇಶದಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣಗೊಂಡಿರುವ ನಡುವೆಯೇ ಜ.10ರಿಂದ ಆರೋಗ್ಯ ಕಾರ್ಯಕರ್ತರು,ನಿಯೋಜಿತ ಚುನಾವಣಾ ಸಿಬ್ಬಂದಿ ಸೇರಿದಂತೆ ಮುಂಚೂಣಿ ಕಾರ್ಯಕರ್ತರು,60 ವರ್ಷ ಮೇಲ್ಪಟ್ಟವರು ಮತ್ತು ಇತರ ಅನಾರೋಗ್ಯಗಳನ್ನು ಹೊಂದಿರುವವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News