ಮೊದಲ ಏಕದಿನ: ಭಾರತದ ಗೆಲುವಿಗೆ 297 ರನ್ ಗುರಿ ನೀಡಿದ ದಕ್ಷಿಣ ಆಫ್ರಿಕಾ

Update: 2022-01-19 12:39 GMT
photo: AFP, ಡುಸ್ಸೆನ್

ಪಾರ್ಲ್, ಜ.19: ನಾಯಕ ಟೆಂಬಾ ಬವುಮಾ(110, 143 ಎಸೆತ)ಹಾಗೂ ರಾಸ್ಸಿ ವಾನ್‌ಡರ್ ಡುಸ್ಸೆನ್(ಔಟಾಗದೆ 129, 96 ಎಸೆತ)ಶತಕದ ಸಹಾಯದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತ ಕ್ರಿಕೆಟ್ ತಂಡಕ್ಕೆ ಮೊದಲ ಏಕದಿನ ಪಂದ್ಯದ ಗೆಲುವಿಗೆ 297 ರನ್ ಗುರಿ ನೀಡಿದೆ.

ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತು.
 
5ನೇ ಓವರ್‌ನಲ್ಲಿ ಮಲನ್(6)ವಿಕೆಟನ್ನು ಕಳೆದುಕೊಂಡ ದಕ್ಷಿಣ ಆಫ್ರಿಕಾ ಕಳಪೆ ಆರಂಭ ಪಡೆದಿತ್ತು. ಕ್ವಿಂಟನ್ ಡಿಕಾಕ್(27) ದೊಡ್ಡ ಮೊತ್ತ ಗಳಿಸಲು ವಿಫಲರಾದರು. ಮರ್ಕ್ರಮ್(4)ರನೌಟಾದರು. ಆಗ ತಂಡವನ್ನು ಆಧರಿಸಿದ ನಾಯಕ ಬವುಮಾ(110 ರನ್, 143 ಎಸೆತ, 8 ಬೌಂಡರಿ)ಹಾಗೂ ರಾಸ್ಸಿ ವಾನ್‌ಡರ್ ಡುಸ್ಸೆನ್(ಔಟಾಗದೆ 129, 96 ಎಸೆತ, 9 ಬೌಂಡರಿ, 4 ಸಿಕ್ಸರ್)4ನೇ ವಿಕೆಟ್‌ಗೆ 204 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಈ ಇಬ್ಬರು ಬ್ಯಾಟರ್‌ಗಳು ವೃತ್ತಿಜೀವನದಲ್ಲಿ ಎರಡನೇ ಶತಕವನ್ನು ಸಿಡಿಸಿದರು. ಭಾರತದ ಪರ ಜಸ್‌ಪ್ರೀತ್ ಬುಮ್ರಾ(2-48)ಯಶಸ್ವಿ ಬೌಲರ್ ಎನಿಸಿಕೊಂಡರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News