ಉತ್ತರಾಖಂಡ್‌: ದಿವಂಗತ ಜನರಲ್‌ ಬಿಪಿನ್‌ ರಾವತ್‌ ಸಹೋದರ ಬಿಜೆಪಿಗೆ ಸೇರ್ಪಡೆ

Update: 2022-01-19 14:32 GMT
Photo: Twitter/@ANI

ದೆಹಲಿ: ಸೇನಾ ಪಡೆಗಳ ಮುಖ್ಯಸ್ಥ ದಿವಂಗತ ಜನರಲ್ ಬಿಪಿನ್ ರಾವತ್ ಅವರ ಕಿರಿಯ ಸಹೋದರ ಕರ್ನಲ್ ವಿಜಯ್ ರಾವತ್ (ನಿವೃತ್ತ) ಬುಧವಾರ, ಜನವರಿ 19 ರಂದು ಬಿಜೆಪಿಗೆ ಸೇರ್ಪಡೆಗೊಂಡರು.

"ಬಿಜೆಪಿಗೆ ಸೇರಲು ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನನ್ನ ತಂದೆ ಬಿಜೆಪಿಯಲ್ಲಿದ್ದರು. ನಿವೃತ್ತಿಯ ನಂತರ ಈಗ ನನಗೆ ಅವಕಾಶ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿ ಮತ್ತು ಚಿಂತನೆಯುಳ್ಳ ನಾಯಕ" ಎಂದು ಕರ್ನಲ್ ರಾವತ್‌ ಹೇಳಿರುವುದಾಗಿ ANI ವರದಿ ಮಾಡಿದೆ.

ಜನರಲ್ ರಾವತ್ ಉತ್ತರಾಖಂಡ್‌ಗಾಗಿ ಕೆಲಸ ಮಾಡಲು ಬಯಸಿದ್ದರು, ಅದನ್ನು ಅವರ ಸಹೋದರ ಮುಂದುವರೆಸುತ್ತಾರೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾವತ್ ಉತ್ತರಾಖಂಡದ ಪೌರಿ ಮೂಲದವರು. ಉತ್ತರಾಖಂಡ್‌ ರಾಜ್ಯದಲ್ಲಿ ಫೆಬ್ರವರಿ 14 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News