ಮಹಾರಾಷ್ಟ್ರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಹುಮತ ಸಾಧಿಸಿದ ಮಹಾ ವಿಕಾಸ ಅಘಾಡಿ, ಬಿಜೆಪಿಗೆ ಅತೀ ಹೆಚ್ಚು ಸ್ಥಾನ

Update: 2022-01-19 14:38 GMT
ಸಾಂದರ್ಭಿಕ ಚಿತ್ರ (PTI)

ಮುಂಬೈ: ಮಹಾರಾಷ್ಟ್ರದ 106 ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಶಿವಸೇನೆ-ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿಯ ಮಹಾ ವಿಕಾಸ ಆಘಡಿ ಚುನಾವಣೆಯಲ್ಲಿ ಬಹುಮತ ಸಾಧಿಸಿದೆ.

ಇದುವರೆಗಿನ ಒಟ್ಟಾರೆ ಚಿತ್ರಣವು, ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ 25 ಕ್ಷೇತ್ರಗಳಲ್ಲಿ, 24 ಕಡೆ ಬಿಜೆಪಿ ಹಾಗೂ ಕಾಂಗ್ರೆಸ್‌ ಮತ್ತು ಶಿವಸೇನಾ ಅನುಕ್ರಮವಾಗಿ 18 ಹಾಗೂ 14 ಕಡೆ ಗೆಲುವು ಸಾಧಿಸಿದೆ ಎಂದು NDTV ವರದಿ ಮಾಡಿದೆ. 

ಎನ್‌ಸಿಪಿ, ಶಿವಸೇನೆ ಹಾಗೂ ಕಾಂಗ್ರೆಸ್‌ ಕೆಲವು ಕಡೆಗಳಲ್ಲಿ ಮಹಾ ವಿಕಾಸ ಆಘಡಿಯಡಿಯಲ್ಲಿ ಜಂಟಿಯಾಗಿ ಸ್ಪರ್ಧಿಸಿದ್ದರೆ, ಕೆಲವು ಕಡೆಗಳಲ್ಲಿ ಏಕಾಂಗಿ ಸ್ಪರ್ಧೆಯನ್ನೂ ನಡೆಸಿವೆ.  

ಬಿಜೆಪಿ ರಾಜ್ಯದಲ್ಲಿ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ಸುಮಾರು 26 ತಿಂಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದರೂ, ಬಿಜೆಪಿ ಯಶಸ್ವಿಯಾಗಿದೆ. ಯಾವುದೇ ಸರ್ಕಾರದ ಬೆಂಬಲವಿಲ್ಲದೆ ನಾವು ಉತ್ತಮ ಫಲಿತಾಂಶಗಳನ್ನು ನೀಡಬಹುದು ಎನ್ನುವುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಬಿಜೆಪಿ 379 ಸ್ಥಾನಗಳನ್ನು ಎನ್‌ಸಿಪಿ 359,  ಶಿವಸೇನೆ 297 ಮತ್ತು ಕಾಂಗ್ರೆಸ್ 281 ಸ್ಥಾನಗಳನ್ನು ಗೆದ್ದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News