ಮುಕ್ತ ವಿವಿ ಪರೀಕ್ಷಾ ಶುಲ್ಕ ಪಾವತಿಗೆ ಸೂಚನೆ

Update: 2022-01-20 16:16 GMT

ಉಡುಪಿ, ಜ.20: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02ರಿಂದ 2014-15 ಹಾಗೂ 2018-19, 2019-20 ಸ್ನಾತಕ ಪದವಿ, ಎಲ್‌ಎಲ್‌ಎಂ, ಎಂಬಿಎ(ಲಾ), ಎಂಟಿಎಂ ಪದವಿಯ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ 2020-21ನೇ ಶೈಕ್ಷಣಿಕ ಸಾಲಿನಲ್ಲಿ (ಜನವರಿ ಆವೃತಿ) ಪ್ರವೇಶ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಲಿಬ್, ಐ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಲಿಬ್.ಐ.ಎಸ್ಸಿ, ಎಲ್ಲಾ ಎಂ.ಎಸ್ಸಿ ಮತ್ತು ಎಲ್ಲಾ ಸ್ನಾತಕ, ಸ್ನಾತಕೋತ್ತರ ಡಿಪ್ಲೋಮಾ, ಸರ್ಟಿಫಿಕೇಟ್ ಕಾರ್ಯಕ್ರಮ ಗಳ ವಿದ್ಯಾರ್ಥಿಗಳು ವಾರ್ಷಿಕ ಅಥವಾ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕ ದಂಡ ಶುಲ್ಕವಿಲ್ಲದೇ ಪಾವತಿಸಲು ಜನವರಿ 24 ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಪಾವತಿಸಲು ಫೆಬ್ರವರಿ 7 ಕೊನೆಯ ದಿನವಾಗಿದೆ.

ಈ ಕುರಿತ ಹೆಚ್ಚಿನ ಮಾಹಿತಿಗಳಿಗಾಗಿ ವಿಶ್ವವಿದ್ಯಾನಿಲಯದ ವೆಬ್‌ಸೈಟ್ -www.ksoumysuru.ac.in - ಅಥವಾ ಸಹಾಯವಾಣಿ ಸಂಖ್ಯೆ: 8800335638 ಅನ್ನು ಸಂಪರ್ಕಿಸುವಂತೆ ಕ.ರಾ.ಮು. ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News