ಶಿಕ್ಷಣ ಸಂಸ್ಥೆಗಳಲ್ಲಿ ಶಿರವಸ್ತ್ರ ನಿಷೇಧವು ಸಾಂವಿಧಾನಿಕ ಹಕ್ಕಿನ ನಿರಾಕರಣೆ: ವೆಲ್ಫೇರ್ ಮಹಿಳಾ ಘಟಕ

Update: 2022-01-22 16:44 GMT

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸ ಒದಗಿಸಿದ ಮತ್ತು ಮಾಧ್ಯಮಗಳ ಪುಟ ತುಂಬಿಸುತ್ತಿರುವ ವಿದ್ಯಾರ್ಥಿನಿಯರ ಶಿರವಸ್ತ್ರ ನಿಷೇಧ ಎಂಬ ವಿವಾದವು ಒಂದು ರಾಜಕೀಯ ಪ್ರೇರಿತ ಹಿನ್ನೆಲೆಯಿಂದ ಸೃಷ್ಟಿಸಿದ ಕೃತಕ ಸಮಸ್ಯೆಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಹಿಳಾ ಘಟಕ ಅಧ್ಯಕ್ಷೆ ಮಮ್ತಾಝ್ ವಾಮಂಜೂರು ತಿಳಿಸಿದ್ದಾರೆ.

ಹೆಣ್ಣು ಮಕ್ಕಳು ಇಷ್ಟೊಂದು ವರ್ಷಗಳಿಂದ ಇದನ್ನು ತಮ್ಮ ಸಾಂವಿಧಾನಿಕ ಹಕ್ಕುಗಳಾದ, ಧಾರ್ಮಿಕ ಹಕ್ಕು ಮತ್ತು ಸಭ್ಯ ವಸ್ತ್ರಧಾರಣೆಯ ಹಕ್ಕುಗಳೋಪಾದಿಯಲ್ಲಿ ಅನುಸರಿಸುತ್ತಾ ಬಂದಿರುವರು. ಮಾತ್ರವಲ್ಲದೆ, ಇದು ಯಾವುದೇ ಸಮವಸ್ತ್ರ ಪದ್ಧತಿಯನ್ನು ಉಲ್ಲಂಘಿಸದೆ ಸಂಸ್ಥೆಗಳ ನಿಯಮಿತ, ನಿಗದಿತ ಬಣ್ಣದಲ್ಲೇ ಅವರು ಅದನ್ನು ಧರಿಸುತ್ತಲೇ ತರಗತಿಗಳಿಗೆ ಹಾಜರಾಗಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಪ್ರತಿಭೆಯನ್ನು ಬೆಳಗಿಸಿ ರಾಜ್ಯ ಮಟ್ಟದಲ್ಲಿಯೂ, ರಾಷ್ಟ್ರ ಮಟ್ಟದಲ್ಲಿಯೂ ತಮಗೂ ತಮ್ಮ ವಿದ್ಯಾ ಸಂಸ್ಥೆಗಳಿಗೂ ಉತ್ತಮ ಹೆಸರನ್ನು ಗಳಿಸಿಕೊಂಡೆ ಬಂದಿದ್ದು ಇದೀಗ ಇದರ ವಿರುದ್ಧ ಧ್ವನಿ ಎತ್ತಿರುವುದು ಖಂಡಿತಾ ಅಸಂವಿಧಾನಿಕವಾಗಿದೆ ಮಾತ್ರವಲ್ಲ ರಾಜ್ಯದ ಶಿಕ್ಷಣ ಸಚಿವರು ಕೂಡಾ, ಪ್ರಾಯಶಃ ತಮ್ಮ ಪ್ಯಾಸಿಸ್ಟ್ ಸರ್ಕಾರದ ಅಥವಾ ಅದರ ನಾಯಕರ ಆದೇಶದ ಮೇರೆಗೆ ಇರಲೂಬಹುದಾದರೂ, ಶಿರವಸ್ತ್ರಧಾರಣೆ ಅಶಿಸ್ತು ಎಂಬ ವಿಪರ್ಯಾಸದ ಹೇಳಿಕೆ ನೀಡಿರುವುದು ವಿಷಾದನೀಯ ವಿಚಾರವಾಗಿದೆ ಎಂದು ಮಮ್ತಾಝ್ ಖಂಡಿಸಿದ್ದು, ಅನಗತ್ಯ ವಿವಾದವನ್ನು ತಕ್ಷಣ ಪರಿಹರಿಸಿ ಮಕ್ಕಳಿಗೆ ಸಂವಿಧಾನ ಬದ್ಧವಾದ ಅವಕಾಶದೊಂದಿಗೆ ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೆಂದು ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News