×
Ad

ನೇತಾಜಿ ಸುಭಾಷಚಂದ್ರ ಬೋಸ್ ರನ್ನು ಭಾರತದ ಪ್ರಥಮ ಪ್ರಧಾನಿಯಾಗಿ ಗುರುತಿಸಬೇಕು: ಟಿಎಂಸಿ ನಾಯಕ

Update: 2022-01-24 22:08 IST
ಹಿರಿಯ ಟಿಎಂಸಿ ನಾಯಕ ಕುನಾಲ ಘೋಷ್(photo:PTI)

ಕೋಲ್ಕತಾ,ಜ.24: ನೇತಾಜಿ ಸುಭಾಷಚಂದ್ರ ಬೋಸ್ ಅವರು 1943,ಅಕ್ಟೋಬರ್‌ನಲ್ಲಿ ರಚನೆಯಾಗಿದ್ದ ಸ್ವತಂತ್ರ ಭಾರತದ ಹಂಗಾಮಿ ಸರಕಾರದ ಮುಖ್ಯಸ್ಥರಾಗಿದ್ದರಿಂದ ಅವರನ್ನು ದೇಶದ ಮೊದಲ ಪ್ರಧಾನಿಯನ್ನಾಗಿ ಗುರುತಿಸಬೇಕು ಎಂದು ಹಿರಿಯ ಟಿಎಂಸಿ ನಾಯಕ ಕುನಾಲ ಘೋಷ್ ಅವರು ಸೋಮವಾರ ಇಲ್ಲಿ ಹೇಳಿದರು.

ನೇತಾಜಿಯವರಿಂದ ಆಝಾದ್ ಹಿಂದ್ ಸರಕಾರದ ಘೋಷಣೆಗೆ ಸಂಬಂಧಿಸಿದ ಘಟನೆಗಳನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಅವರು ಪ.ಬಂಗಾಳ ಶಿಕ್ಷಣ ಇಲಾಖೆಯನ್ನೂ ಆಗ್ರಹಿಸಿದರು.

ಪ್ರತಿಮೆ ಸ್ಥಾಪನೆಯು ನಿಜವಾದ ಗೌರವವಲ್ಲ. ನೇತಾಜಿಯವರಿಗೆ ಸಂಬಂಧಿಸಿದ ಎಲ್ಲ ಕಡತಗಳ ಅವರ್ಗೀಕರಣ,ರೆಂಕೋಜಿ ಭಸ್ಮದ ಡಿಎನ್ಎ ಪರೀಕ್ಷೆ ಮತ್ತು ಅವರನ್ನು ದೇಶದ ಮೊದಲ ಪ್ರಧಾನಿಯನ್ನಾಗಿ ಗುರುತಿಸುವುದು ನಿಜವಾದ ಗೌರವವಾಗುತ್ತದೆ ಎಂದು ಟಿಎಂಸಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಘೋಷ್ ಹೇಳಿದರು.

ನೇತಾಜಿಯವರು ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಹೊಣೆಯನ್ನೂ ಹೊಂದಿದ್ದರು ಹಾಗೂ ಆಝಾದ್ ಹಿಂದ್ ಸರಕಾರಕ್ಕೆ ಒಂಭತ್ತು ದೇಶಗಳು ಮಾನ್ಯತೆ ನೀಡಿದ್ದವು ಮತ್ತು ಅದರೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದವು ಎಂದ ಘೋಷ್, ನೇತಾಜಿಯವರನ್ನು ದೇಶದ ಮೊದಲ ಪ್ರಧಾನಿಯನ್ನಾಗಿ ಗುರುತಿಸಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಳ್ಳಬೇಕೇ ಎನ್ನುವುದು ಕೇಂದ್ರ ಸರಕಾರದ ನಿರ್ಧಾರಕ್ಕೆ ಬಿಟ್ಟ ವಿಷಯವಾಗಿದೆ. ಆದರೆ ಆ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿ ಶಾಲಾ ಪಠ್ಯಕ್ರಮದಲ್ಲಿ ಆಝಾದ್ ಹಿಂದ್ ಸರಕಾರದ ಘೋಷಣೆಗೆ ಸಂಬಂಧಿಸಿದ ಘಟನೆಗಳನ್ನು ಸೇರ್ಪಡೆಗೊಳಿಸುವಂತೆ ತಾನು ರಾಜ್ಯ ಶಿಕ್ಷಣ ಇಲಾಖೆಯನ್ನು ಆಗ್ರಹಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News