×
Ad

ಉಡುಪಿ: ವಿಬಿಸಿಎಲ್‌ನಲ್ಲಿ ರಾಷ್ಟ್ರೀಯ ಮತದಾರರ ಹಕ್ಕುಗಳ ದಿನಾಚರಣೆ

Update: 2022-01-25 20:10 IST

ಉಡುಪಿ, ಜ.25: ನಗರದ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ಹಕ್ಕುಗಳ ದಿನದ ಪ್ರಯುಕ್ತ ಮತದಾರರ ಹಕ್ಕುಗಳು ಎಂಬ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಕುಮಾರಿ ಕೆ. ಅವರು ವಿಷಯದ ಕುರಿತು ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ತುಂಬಾ ಮಹತ್ವವಾದದ್ದು ಹಾಗೂ ವೌಲ್ಯಯುತವಾದದ್ದು ಎಂದರಲ್ಲದೇ, ಮತದಾನದ ಮಹತ್ವ, ಸಂಧಾನದ ವಿವಿಧ ಉಪಬಂಧಗಳ ಬಗ್ಗೆ ವಿವರಣೆ ನೀಡಿದರು.

ಮತದಾನದ ಸಂದರ್ಭದಲ್ಲಿ ಮತದಾರರು ಅದರಲ್ಲೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಚುನಾವಣೆಯ ಸಂದರ್ಭಗಳಲ್ಲಿ ಸೂಕ್ತ ಅಭ್ಯರ್ಥಿಗಳಿಗೆ ವಿವೇಚನೆಯುತವಾಗಿ ಮತದಾನ ಮಾಡಬೇಕು. ಭಾರತದ ಸಂವಿಧಾನವು ಮತದಾನದ ಹಕ್ಕನ್ನು ಪ್ರಜೆಗಳಿಗೆ ನೀಡಿದ್ದು ಇದನ್ನು ಚಲಾಯಿಸುವ ಸಂದರ್ಭದಲ್ಲಿ ಯಾವುದೇ ಆಸೆ ಅಮಿಷಗಳಿಗೆ ಒಳಗಾಗ ಬಾರದು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತದಾನ ದಿನದ ಪ್ರತಿಜ್ಞಾ ವಿಧಿಯನ್ನು ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಪತ್‌ಕುಮಾರ್ ವಿದ್ಯಾರ್ಥಿಗಳಿಗೆ ಬೋಧಿಸಿದರು. ಕಾಲೇಜಿನ ಪ್ರಾಧ್ಯಾಪಕರಾದ ರೋಹಿತ್ ಎಸ್ ಅಮೀನ್, ಡಾ.ಶಿ್ರೀನಿವಾಸ್ ಪ್ರಸಾದ್ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನನ್ಯ ಸ್ವಾಗತಿಸಿ ನಿರೂಪಿಸಿದರು. ಸೈಮಾ ವಂದಿಸಿದರು. ಮತದಾರರ ಸಾಕ್ಷರತಾ ಕ್ಲಬ್‌ನ ಕಾರ್ಯದರ್ಶಿಗಳಾದ ಚಂದ್ರಿಕಾ ಹಾಗೂ ಸುಲೋಚನ ಕಾರ್ಯಕ್ರಮ ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News