ವ್ಯಾಪಕ ಪ್ರತಿಭಟನೆ ಹಿನ್ನೆಲೆ: ರೈಲ್ವೆ ಎರಡನೇ ಹಂತದ ನೇಮಕಾತಿ ಪರೀಕ್ಷೆ ರದ್ದು

Update: 2022-01-26 18:10 GMT

ಪಾಟ್ನಾ, ಜ. 26: ನೇಮಕಾತಿ ಪ್ರಕ್ರಿಯೆ ಕುರಿತಂತೆ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಫೆಬ್ರವರಿ 15ರಂದು ನಿಗದಿಯಾಗಿದ್ದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಹಾಗೂ ಲೆವೆಲ್ 1 ಪರೀಕ್ಷೆಯ ಎರಡನೇ ಸುತ್ತನ್ನು ರೈಲ್ವೆ ನೇಮಕಾತಿ ಮಂಡಳಿ ರದ್ದುಗೊಳಿಸಿದೆ. ಮೊದಲ ಸುತ್ತಿನ ಪರೀಕ್ಷೆಯ ಫಲಿತಾಂಶವನ್ನು ಜನವರಿ 14 ಹಾಗೂ ಜನವರಿ 15ರಂದು ಘೋಷಿಸಲಾಗಿತ್ತು. ‌

ನೇಮಕಾತಿ ಪರೀಕ್ಷೆಯ ಫಲಿತಾಂಶ ದೋಷಪೂರಿತವಾಗಿದೆ ಎಂದು ಆರೋಪಿಸಿ ಅಭ್ಯರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಕಟ್ ಆಫ್ ತುಂಬಾ ಹೆಚ್ಚಾಗಿದೆ. ಹಲವು ಹುದ್ದೆಗಳಿಗೆ ಒಬ್ಬನೇ ಆಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಇತರ ಉದ್ಯೋಗಾಕಾಂಕ್ಷಿಗಳಿಗೆ ಅವಕಾಶ ಸೀಮಿತಗೊಂಡಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಕನಿಷ್ಠ ಉದ್ಯೋಗ ಅರ್ಹತೆ ಅಗತ್ಯ ಇರುವ ಹುದ್ದೆಗಳಿಗೆ ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News