ಜ.28ರಿಂದ ಇಂಗ್ಲೀಷ್ ಸಂವಹನ ತರಬೇತಿ
Update: 2022-01-27 22:08 IST
ಉಡುಪಿ, ಜ.27: ಮಂಗಳೂರಿನ ಸಾತ್ವಿಕ ಭಾರತೀಯ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯು 73ನೇ ಗಣರಾಜ್ಯೋತ್ಸವದಂಗವಾಗಿ ಜ.28ರಿಂದ ಜ.30ರವರೆಗೆ 3 ದಿನಗಳ ಕಾಲ ಎಲ್ಲಾ ವಯೋಮಾನದವರಿಗಾಗಿ ಇಂಗ್ಲೀಷ್ ಭಾಷಾ ಸಂವಹನ ತರಬೇತಿಯನ್ನು ನೀಡಲಿದೆ.
ತರಬೇತಿಯಲ್ಲಿ ಮಂಗಳೂರಿನ ಹೆಸರಾಂತ ಭಾಷಾ ಪಂಡಿತರಾದ ನೆವಿಲ್ ರೋಡ್ರಿಗ್ಸ್ ಅವರು ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಮಾತನಾಡುವುದು ಹೇಗೆ, ಸಭೆ ಸಮಾರಂಭಗಳಲ್ಲಿ ತಮ್ಮ ಸ್ವಪರಿಚಯ ಮಾಡಿಕೊಳ್ಳುವುದು ಹೇಗೆ, ಅಲ್ಲದೇ ಇಂಗ್ಲೀಷ್ ಭಾಷೆಯಿಂದ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವುದು ಹೇಗೆ ಎಂಬ ಕುರಿತು ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣದ ಮೂಲಕ ಆನ್ ಲೈನ್‌ನಲ್ಲಿ ಮಾಹಿತಿ ನೀಡಲಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗೆ ನೆವಿಲ್ ರೋಡ್ರಿಗ್ಸ್(8971899088) ಅವರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.