ಆರ್‌ಆರ್‌ಬಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಜನವರಿ 28ರಂದು ಬಿಹಾರ್ ಬಂದ್ ಗೆ ಎಐಎಸ್ಎ ಕರೆ

Update: 2022-01-27 18:43 GMT

ಪಾಟ್ನಾ: ರೈಲ್ವೆ ನೇಮಕಾತಿ ಮಂಡಳಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಅಕ್ರಮ ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿಗಳ ಸಂಘಟನೆ (ಎಐಎಸ್ಎ) ಜನವರಿ 28ರಂದು ಬಿಹಾರ್ ಬಂದ್ಗೆ ಕರೆ ನೀಡಿದೆ.

ಈ ಬಂದ್ಗೆ ಬಿಹಾರದ ಮಹಾಮೈತ್ರಿ ಕೂಟ ಕೂಡ ಬೆಂಬಲ ವ್ಯಕ್ತಪಡಿಸಿದೆ. ಆರ್ಆರ್ಬಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಹಲವು ವಿದ್ಯಾರ್ಥಿಗಳು ಆರೋಪಿಸಿದ ಬಳಿಕ ಪ್ರತಿಭಟನೆ ಆರಂಭವಾಗಿದೆ. ಆರ್ಆರ್ಬಿಯ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ಟಿಪಿಸಿ)ಗೆ ಎರಡು ಕಂಪ್ಯೂಟರ್ ಆಧರಿತ ಪರೀಕ್ಷೆ (ಸಿಬಿಟಿ)ಗಳನ್ನು ನಡೆಸುವ ಸರಕಾರದ ನಿರ್ಧಾರದ ಬಗ್ಗೆ ರಾಜ್ಯಾದ್ಯಂತದ ಸಾವಿರಾರು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಆರ್ಬಿಯ 2019ರ ಅಧಿಸೂಚನೆಯಲ್ಲಿ ನೇಮಕಾತಿಗೆ ಈ ಮಾನದಂಡವನ್ನು ಉಲ್ಲೇಖಿಸಿಲ್ಲ. ಸರಕಾರ ಅಧಿಸೂಚನೆಯಲ್ಲಿ ಒಂದೇ ಒಂದು ಕಂಪ್ಯೂಟರ್ ಪರೀಕ್ಷೆ ನಡೆಸಲಾಗುವುದು ಎಂದು ಉಲ್ಲೇಖಿಸಿತ್ತು ಎಂದು ಪ್ರತಿಭಟನಕಾರರು ಪ್ರತಿಪಾದಿಸಿದ್ದಾರೆ.

ಆದರೆ, ಈ ಆರೋಪವನ್ನು ರೈಲ್ವೆ ಸಚಿವಾಲಯ ನಿರಾಕರಿಸಿದೆ. 2019ರ ನೇಮಕಾತಿ ನೋಟಿಸಿನಲ್ಲಿ ಪರೀಕ್ಷೆ (ಸಿಬಿಟಿ-2)ಯ ಎರಡನೇ ಹಂತವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು ಎಂದು ಅದು ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News