ಮಂಗಳೂರು, ಬೆಂಗಳೂರಿನಲ್ಲಿ ಕುಸಿಯುತ್ತಿರುವ ವಾಯು ಗುಣಮಟ್ಟ : ಗ್ರೀನ್‌ಪೀಸ್‌ ಇಂಡಿಯಾ ವರದಿ

Update: 2022-01-28 11:47 GMT

ಬೆಂಗಳೂರು: ಗ್ರೀನ್ ಪೀಸ್ ಇಂಡಿಯಾ ಹೊರತಂದ ವರದಿಯ ಪ್ರಕಾರ ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಸಹಿತ ಭಾರತದ ಹತ್ತು ನಗರಗಳು ಗರಿಷ್ಠ ಮಟ್ಟದ ಮಾಲಿನ್ಯವನ್ನು ದಾಖಲಿಸಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ನವೆಂಬರ್ 2020 ಹಾಗೂ ನವೆಂಬರ್ 2021ರ ನಡುವಿನ ವರದಿಯನ್ನು ಆಧರಿಸಿ ಗ್ರೀನ್‍ಪೀಸ್ ಇಂಡಿಯಾ ತನ್ನ ವರದಿಯನ್ನು ಸಿದ್ಧಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಮಿತಿಗಿಂತಲೂ ಅಧಿಕ ಮಾಲಿನ್ಯ ಪ್ರಮಾಣವನ್ನು ಮೇಲಿನ ಮೂರು ನಗರಗಳು ದಾಖಲಿಸಿವೆ. ಮಂಗಳೂರು. ಬೆಂಗಳೂರು, ಕೊಯಂಬತ್ತೂರು ಮತ್ತು ಅಮರಾವತಿ ನಗರಗಳ ವಾಯು ಗುಣಮಟ್ಟವು (ಪಿಎಂ 2.5) ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಮಿತಿಗಿಂತ ಆರರಿಂದ ಏಳು ಪಟ್ಟು ಅಧಿಕವಾಗಿವೆ. ಮೈಸೂರು, ಕೊಚ್ಚಿ, ಚೆನ್ನೈ ಮತ್ತು ಪುದುಚ್ಚೇರಿಯಲ್ಲಿ ಈ ಪ್ರಮಾಣ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ.

ಉತ್ತರ ಭಾರತ ಮಾತ್ರವಲ್ಲ, ದಕ್ಷಿಣ ಭಾರತದಲ್ಲೂ ವಾಯು ಗುಣಮಟ್ಟ ಕುಸಿಯುತ್ತಿದೆ ಎಂದು ವರದಿ ಹೇಳಿದೆ.

ಮಂಗಳೂರು, ಅಮರಾವತಿ, ಚೆನ್ನೈ ಮತ್ತು ಕೊಚ್ಚಿಯ ವಾಯು ಮಾಲಿನ್ಯ ಮಟ್ಟವು(ಪಿಎಂ 10) ನಿಗದಿತ ಮಿತಿಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿದ್ದರೆ, ಮೈಸೂರು, ಕೊಯಂಬತ್ತೂರು ಮತ್ತು ಪುದುಚ್ಚೇರಿಯಲ್ಲಿ ಮಾಲಿನ್ಯ ಮಟ್ಟ ಎರಡರಿಂದ ಮೂರು ಪಟ್ಟು ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News