ಸ್ಟೂಡೆಂಟ್ ಕೆಡೆಟ್ ಪೊಲೀಸ್ ಸಮವಸ್ತ್ರದಲ್ಲಿ ಹಿಜಾಬ್, ಉದ್ದ ತೋಳಿನ ಉಡುಗೆಗೆ ಅವಕಾಶವಿಲ್ಲ ಎಂದ ಕೇರಳ ಸರಕಾರ

Update: 2022-01-28 12:05 GMT
ಸಾಂದರ್ಭಿಕ ಚಿತ್ರ

ತಿರುವನಂತಪುರಂ: ಕೇರಳದ ಸ್ಟೂಡೆಂಟ್ ಪೊಲೀಸ್ ಕೆಡೆಟ್‍ಗಳಿಗೆ ಸಮವಸ್ತ್ರದ ಭಾಗವಾಗಿ ಹಿಜಾಬ್ ಅಥವಾ ಪೂರ್ಣ ತೋಳಿನ ಉಡುಗೆ ಧರಿಸಲು ಅನುಮತಿಸಲಾಗುವುದಿಲ್ಲ ಎಂದು ಕೇರಳ ಸರಕಾರ ಇಂದು ಸ್ಪಷ್ಟಪಡಿಸಿದೆ ಎಂದು ವರದಿಗಳು ತಿಳಿಸಿವೆ.

ಇಂದಿನ ಸಂದರ್ಭದಲ್ಲಿ ಸಮವಸ್ತ್ರ ವಿಚಾರದಲ್ಲಿ ಧಾರ್ಮಿಕ ವಿಚಾರಗಳನ್ನು ಸೇರಿಸಿದರೆ ಇಂತಹುದೇ ಬೇಡಿಕೆಗಳು ಇತರೆಡೆಗಳಿಂದಲೂ ಬರಬಹುದು ಎಂದು  ಕೇರಳ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿಗಳು ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.

ರಾಜ್ಯದ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬಳು ತನಗೆ ಸ್ಟೂಡೆಂಟ್  ಪೊಲೀಸ್ ಕೆಡೆಟ್ ಸಮವಸ್ತ್ರದ ಜತೆಗೆ ಹಿಜಾಬ್ ಧರಿಸಲು ಅನುಮತಿಸಬೇಕೆಂದು ಕೋರಿ ಹೈಕೋರ್ಟಿಗೆ ಸಲ್ಲಿಸಿದ ಮನವಿಗೆ ಪ್ರತಿಯಾಗಿ ಸರಕಾರ ಮೇಲಿನಂತೆ ಸ್ಪಷ್ಟೀಕರಣ ನೀಡಿದೆ. ಹಿಜಾಬ್ ಧರಿಸುವುದು ತನ್ನ ಮೂಲಭೂತ ಹಕ್ಕು ಎಂದೂ ಆ ವಿದ್ಯಾರ್ಥಿನಿ ವಾದಿಸಿದ್ದಳು.  ನ್ಯಾಯಾಲಯವು ರಾಜ್ಯ ಗೃಹ ಇಲಾಖೆಗೆ ಈ ಕುರಿತು ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು.

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಆಗಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ 10ರಿಂದ 12ರಷ್ಟು ವಿದ್ಯಾರ್ಥಿಗಳು ಮುಸ್ಲಿಂ ಸಮುದಾಯದವರಾದರೂ ಇಲ್ಲಿಯ ತನಕ ಬೇರೆ ಯಾರೂ ಇಂತಹ ಬೇಡಿಕೆ ಮುಂದಿಟ್ಟಿಲ್ಲ ಎಂದು ರಾಜ್ಯದ ಗೃಹ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News