ಅಂಬೇಡ್ಕರ್‌ಗೆ ಅವಮಾನ: ನ್ಯಾಯಾಧೀಶ ವಜಾಕ್ಕೆ ಸಮಾಜ ಕಲ್ಯಾಣ ಸಚಿವರಿಗೆ ಮನವಿ
ಉಡುಪಿ, ಜ.28: ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋ ತೆಗೆಸಿ ಸಾರ್ವಜನಿಕವಾಗಿ ಅಮಮಾನಿಸಿ ದೇಶ ಹಾಗೂ ಸಂವಿಧಾನಕ್ಕೆ ಅಪಚಾರಗೈದ ರಾಯಚೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಪ್ರಕರಣ ದಾಖಲಿಸಿ ಹುದ್ದೆಯಿಂದ ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿಯು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿತು.
ಸರಕಾರದ ಆದೇಶವನ್ನು ಉಲ್ಲಂಘಿಸಿರುವ ನ್ಯಾಯಾಧೀಶರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಲು ಸಂಬಂಧಪಟ್ಟ ಇಲಾಖೆಗೆ ಆದೇಶ ನೀಡಬೇಕು. ಮಲ್ಲಿಕಾರ್ಜುನ ಗೌಡರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿ ಸಲು ಆದೇಶಿಸುವ ಮೂಲಕ ನ್ಯಾಯಾಲಯ ಮತ್ತು ಭಾರತ ಸರಕಾರದ ಗೌರವ ಉಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ್ ಪೇತ್ರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವ್ನಿೇಶ್ ಬ್ರಹ್ಮಾವರ, ಭೀಮ್ ಆರ್ಮಿಯ ಪ್ರಕಾಶ್ ಹೇರೂರು, ಉಮೇಶ್ ಬಿರ್ತಿ, ಪವನ್ ಕೋಟ, ರಾಜೇಶ್ ಬ್ರಹ್ಮಾವರ, ಇಂದಿರಾ ಬೈಕಾಡಿ, ಯಾದವ್ ಉಪಸ್ಥಿತರಿದ್ದರು.