ಗೋಡ್ಸೆ ಕುರಿತಾದ ‘ವೈ ಐ ಕಿಲ್ಡ್ ಗಾಂಧಿ’ ಚಿತ್ರ ಪ್ರದರ್ಶನಕ್ಕೆ ನಿಷೇಧ ಕೋರಿ ಸುಪ್ರೀಂಗೆ ಮನವಿ

Update: 2022-01-28 18:21 GMT

ಹೊಸದಿಲ್ಲಿ, ಜ. 27: ‘ವೈ ಐ ಕಿಲ್ಲಡ್ ಗಾಂಧಿ’ ಚಿತ್ರ ಅಥವಾ ಅದರ ಅಂಶವನ್ನು ಒಟಿಟಿ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ರೀತಿಯಲ್ಲಿ ಪ್ರದರ್ಶಿಸುವುದು ಅಥವಾ ಪ್ರಕಟಿಸುವುದಕ್ಕೆ ನಿಷೇಧ ವಿಧಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಮನವಿಯೊಂದನ್ನು ಸಲ್ಲಿಸಲಾಗಿದೆ. ‘ವೈ ಐ ಕಿಲ್ಲಡ್ ಗಾಂಧಿ’ ಚಿತ್ರದ ಎಲ್ಲ ಅಂಶವನ್ನು ಆನ್ ಲೈನ್ ವೇದಿಕೆಯಿಂದ ತೆಗೆದುಹಾಕಲು ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಕೂಡ ಮನವಿಯಲ್ಲಿ ಕೋರಲಾಗಿದೆ.

ನ್ಯಾಯವಾದಿ ಅನುಜ್ ಭಂಡಾರಿ ಮೂಲಕ ಮನವಿ ಸಲ್ಲಿಸಿರುವ ಸಿಕಂದರ್ ಬೆಹ್ಲ್ ಅವರು ಒಟಿಟಿ ವೇದಿಕೆಯಲ್ಲಿ ಪ್ರಕಟಿಸುವ ಅಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಇಂತಹ ನಿಯಂತ್ರಣ/ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರತಿವಾದಿಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಎಲ್ಲ ಚಿತ್ರಗಳು ಹಾಗೂ ಅಂಶಗಳು ಪ್ರತಿವಾದಿ ಮಂಡಳಿ ಅಥವಾ ಯಾವುದೇ ಇತರ ಮಂಡಲಿ/ಈ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ರೂಪಿಸಲಾದ ಪ್ರಾಧಿಕಾರದಿಂದ ಸೆನ್ಸಾರ್, ಪ್ರಮಾಣಿಕೃತ ಹಾಗೂ ನಿಯಂತ್ರಿತವಾಗಿರಬೇಕು ಎಂದು ದೂರುದಾರರು ಕೋರಿದ್ದಾರೆ.

ದೂರುದಾರರ ಪ್ರಕಾರ, ‘ವೈ ಐ ಕಿಲ್ಲಡ್ ಗಾಂಧಿ’ ಶೀರ್ಷಿಕೆಯ ಚಿತ್ರವನ್ನು ‘ರೈಟ್ ಮೀಡಿಯಾ ಇಂಟರ್ನ್ಯಾಷನಲ್‌ ಬ್ಯಾನರ್ ಅಡಿಯಲ್ಲಿ ಕಲ್ಯಾಣಿ ಸಿಂಗ್ ನಿರ್ಮಾಣ ಮಾಡಿದ್ದಾರೆ.

ನಾಥುರಾಂ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದಿರುವುದು ಹಾಗೂ ಅನಂತರದ ನ್ಯಾಯಾಲಯದ ವಿಚಾರಣೆಯನ್ನು ‘ವೈ ಐ ಕಿಲ್ಡ್ ಗಾಂಧಿ’ ಚಿತ್ರ ಆಧರಿಸಿದೆ. ಈ ಚಿತ್ರ ಮಹಾತ್ಮಾ ಗಾಂಧಿ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಅದೇ ಸಂದರ್ಭ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಲು ಪ್ರಯತ್ನಿಸುತ್ತದೆ ಎಂದು ದೂರುದಾರರು ಹೇಳಿದ್ದಾರೆ.

‘ವೈ ಐ ಕಿಲ್ಲಡ್ ಗಾಂಧಿ’ ಚಿತ್ರದ ಟ್ರೈಲರ್ ಸಾರ್ವಜನಿಕ ವೀಕ್ಷಣೆಗೆ ಜನವರಿ 22ರಂದು ಬಿಡುಗಡೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News