ಬಿಹಾರದಲ್ಲಿ ಸೇನಾ ವಿಮಾನ ಪತನ

Update: 2022-01-28 18:25 GMT

ಗಯಾ, ಜ. 27: ತರಬೇತು ಪಡೆಯುತ್ತಿರುವ ಇಬ್ಬರು ಪೈಲಟ್ಗಳಿದ್ದ ಬಿಹಾರದ ಗಯಾದ ಭಾರತೀಯ ಸೇನಾಧಿಕಾರಿಗಳ ತರಬೇತು ಅಕಾಡೆಮಿಯ ವಿಮಾನ ಶುಕ್ರವಾರ ಟೇಕ್ ಆಫ್ ಆದ ಕೂಡಲೇ ಪತನಗೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರೂ ಪೈಲೆಟ್ ಗಳು ಸುರಕ್ಷಿತರಾಗಿದ್ದಾರೆ ಎಂದು ಗಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಬಂಗಜೀ್ ಸಹಾ ಅವರು ತಿಳಿಸಿದ್ದಾರೆ.

ಇಬ್ಬರು ಪೈಲೆಟ್ಗಳು ವಿಮಾನವನ್ನು ತುರ್ತಾಗಿ ಇಳಿಸಲು ಪ್ರಯತ್ನಿಸಿದಾಗ ಅದು ಬುದ್ಧಗಯಾ ಬ್ಲಾಕ್ ವ್ಯಾಪ್ತಿಯ ಗ್ರಾಮವೊಂದರ ಹೊಲದಲ್ಲಿ ಪತನಗೊಂಡಿತು ಎಂದು ಅವರು ತಿಳಿಸಿದ್ದಾರೆ.

ವಿಮಾನ ಪತನಗೊಳ್ಳುವುದನ್ನು ನೋಡಿದ ಗ್ರಾಮಸ್ಥರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಅಲ್ಲದೆ, ಇಬ್ಬರು ಪೈಲೆಟ್ಗಳನ್ನು ವಿಮಾನದಿಂದ ಹೊರಗೆಳೆದು ರಕ್ಷಿಸಿದರು. ಅನಂತರ ಅಲ್ಲಿಗೆ ಆಗಮಿಸಿದ ಸೇನಾ ಸಿಬ್ಬಂದಿಗಳು ಇಬ್ಬರು ಪೈಲೆಟ್ಗಳನ್ನು ಕರೆದೊಯ್ದರು. ವಿಮಾನದ ಅವಶೇಷವನ್ನು ಕೂಡ ಅವರು ಕೊಂಡೊಯ್ದಿದ್ದಾರೆ.

ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ. ತಜ್ಞರ ಪರಿಶೀಲನೆಯ ಬಳಿಕ ವಿಮಾನ ಪತನದ ನಿಜವಾದ ಕಾರಣ ತಿಳಿಯಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News