ಸ್ವಘೋಷಿತ ದೇವಮಾನವನಿಗೆ ಪುತ್ರಿಯನ್ನು ನೀಡಿದ ಪ್ರಕರಣ: "ಬಾಲಕಿ ಸೊತ್ತು ಅಲ್ಲ"‌ ಎಂದ ಬಾಂಬೆ ಹೈಕೋರ್ಟ್

Update: 2022-01-28 18:48 GMT

ಮುಂಬೈ, ಜ. 27: ದೇಣಿಗೆ ನೀಡಲು ಬಾಲಕಿ ಸೊತ್ತಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯದ ಔರಂಗಬಾದ್ ಪೀಠ ಪ್ರತಿಪಾದಿಸಿದೆ. ವ್ಯಕ್ತಿಯೋರ್ವ ತನ್ನ 17 ವರ್ಷದ ಪುತ್ರಿಯನ್ನು ಸ್ವಘೋಷಿತ ದೇವ ಮಾನವನಿಗೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿದ್ದ ಸ್ವಘೋಷಿತ ದೇವ ಮಾನವ ಶಂಕೇಶ್ವರ್ ಧಾಂಕೆ ಹಾಗೂ ಆತನ ಅನುಯಾಯಿ ಸೋಪನ್ ಧಾಂಕೆ ಅವರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ವಿಭಾ ಕಂಕನ್ವಾಡಿ ಅವರ ಏಕ ಸದಸ್ಯ ಪೀಠ ಈ ತಿಂಗಳ ಆರಂಭದಲ್ಲಿ ವಿಚಾರಣೆ ನಡೆಸಿತು.

ಈ ಇಬ್ಬರು ಆರೋಪಿಗಳು ಜಲ್ನಾ ಜಿಲ್ಲೆಯ ಬಡೂರಿನಲ್ಲಿರುವ ದೇವಾಲಯದಲ್ಲಿ ತಂದೆ ಹಾಗೂ ಅವರ ಪುತ್ರಿಯೊಂದಿಗೆ ವಾಸಿಸುತ್ತಿದ್ದರು. ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು 2021 ಆಗಸ್ಟ್ನಲ್ಲಿ ಬಾಲಕಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಅವರಿಬ್ಬರನ್ನು ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News