ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ನಾಮಪತ್ರ ಸಲ್ಲಿಕೆ

Update: 2022-01-29 08:05 GMT

ಸಂಗ್ರೂರ್,(ಪಂಜಾಬ್): ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಶನಿವಾರ ಧುರಿ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಸ್ತುತ ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಮಾನ್ ಅವರು ಈಗ ಸಂಗ್ರೂರ್ ಜಿಲ್ಲೆಯ ಧುರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

1973 ರಲ್ಲಿ ಸಂಗ್ರೂರಿನ ಸತೋಜ್ ಗ್ರಾಮದಲ್ಲಿ ಜನಿಸಿದ ಮಾನ್ ಕಾಮಿಡಿಯನ್ ಆಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರು 2011 ರಲ್ಲಿ ಮನ್‌ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪಂಜಾಬ್ ಪೀಪಲ್ಸ್ ಪಾರ್ಟಿಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು.

2012 ರಲ್ಲಿ ಅವರು ಲೆಹ್ರಗಾಗಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಸೋತರು.

ನಂತರ, ಅವರು 2014 ರಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರಿದರು ಹಾಗೂ  ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಆಗ ಶಿರೋಮಣಿ ಅಕಾಲಿದಳದ (ಎಸ್ ಎಡಿ) ಭಾಗವಾಗಿದ್ದ ಪಂಜಾಬ್‌ನ ಅನುಭವಿ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು ಸೋಲಿಸಿದಾಗ ಪಂಜಾಬ್ ರಾಜಕೀಯದಲ್ಲಿ ಅವರ ಪ್ರಾಮುಖ್ಯತೆ ಹೆಚ್ಚಾಯಿತು.

ಮಾನ್ ಅವರು 2014 ರಿಂದ ಸತತವಾಗಿ ಎರಡನೆ ಅವಧಿಗೆ ಸಂಗ್ರೂರ್‌ನ ಪಂಜಾಬ್ ಲೋಕಸಭಾ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News