ಕನಿಷ್ಠ ಬೆಂಬಲ ಬೆಲೆ ಕುರಿತು ಕಾನೂನಿಗಾಗಿ ಹೋರಾಟ ಮುಂದುವರಿಯಲಿದೆ:‌ ರೈತ ಮುಖಂಡ ರಾಕೇಶ್ ಟಿಕಾಯತ್

Update: 2022-01-29 15:50 GMT

ಹೊಸದಿಲ್ಲಿ,ಜ.29: ರೈತರ ಉತ್ಪನ್ನಗಳಿಗಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ಕಾನೂನಿಗಾಗಿ ಹೋರಾಟವು ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ ಯೂನಿಯನ್ ನಾಯಕ ರಾಕೇಶ ಟಿಕಾಯತ್ ಅವರು ಶನಿವಾರ ಹೇಳಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ಆಂದೋಲನದ ಸಂದರ್ಭ ರೈತ ಕುಟುಂಬಗಳು 700ಕ್ಕೂ ಅಧಿಕ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಕಳೆದ ವರ್ಷದ ಆ ದಿನಗಳನ್ನು ರೈತರು ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟಿಸಿರುವ ಟಿಕಾಯತ್, ಎಂಎಸ್‌ಪಿ ರೈತರ ಬೆನ್ನೆಲುಬು ಆಗಿದೆ ಮತ್ತು ಕೃಷಿಯ ಭವಿಷ್ಯವನ್ನು ರಕ್ಷಿಸಲು ಎಂಎಸ್‌ಪಿ ಖಾತರಿ ಕಾನೂನನ್ನು ರೈತರು ಬಯಸಿದ್ದಾರೆ. ಹೋರಾಟವು ಮುಂದುವರಿಯುತ್ತದೆ, ಹೋರಾಟವು ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಕಳೆದ  ವರ್ಷದ ನ.19ರಂದು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು,ಸರಕಾರವು ಎಂಎಸ್‌ಪಿಗಾಗಿ ನೂತನ ಮಾರ್ಗಸೂಚಿ ರೂಪಿಸಲು ಸಮಿತಿಯೊಂದನ್ನು ರಚಿಸಲಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News