×
Ad

ಇಂಡಿಯಾ ಟಿವಿ ಕಾರ್ಯಕ್ರಮದ ಸ್ಕ್ರೀನ್ ನಲ್ಲಿ ರಾಮಮಂದಿರದ ಫೋಟೊ: ನಿರೂಪಕನಿಗೆ ಟಿಕಾಯತ್ ತರಾಟೆ

Update: 2022-01-29 23:37 IST
Photo: Twitter/@zoo_bear

ಹೊಸದಿಲ್ಲಿ: ಬಿಜೆಪಿಯ ವಿಭಜಕ ಕಾರ್ಯಸೂಚಿಯನ್ನು ಮುಂದಿಡುತ್ತಿದ್ದಾರೆ ಎಂದು ಆರೋಪಿಸಿ ರಜತ್ ಶರ್ಮಾ ಅವರ 'ಇಂಡಿಯಾ ಟಿವಿ' ವಾಹಿನಿಯ ನಿರೂಪಕನ ವಿರುದ್ಧ ರೈತ ಮುಖಂಡ ರಾಕೇಶ್ ಟಿಕಾಯತ್ ವಾಗ್ದಾಳಿ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಇಂಡಿಯಾ ಟಿವಿ ಆಯೋಜಿಸಿದ ಸಂವಾದದ ವೇದಿಕೆಯಲ್ಲಿ ರಾಮಮಂದಿರದ ಚಿತ್ರ ಪ್ರದರ್ಶಿಸಿರುವುದನ್ನು ತೋರಿಸಿದ ಟಿಕಾಯತ್‌, ಬಿಜೆಪಿಯ ವಿಭಜಕ ತಂತ್ರಗಳನ್ನು ನೀವು ಯಾಕೆ ಪ್ರಮೋಟ್‌ ಮಾಡುತ್ತಿದ್ದೀರಿ ಎಂದು ವೇದಿಕೆಯಲ್ಲೇ ನಿರೂಪಕನನ್ನು ಪ್ರಶ್ನಿಸಿದ್ದಾರೆ. 

“ಇದನ್ನು (ರಾಮ ಮಂದಿರದ ಫೋಟೋ) ತೋರಿಸಲು ನಿಮಗೆ ಯಾವ ಒತ್ತಾಯಗಳಿವೆ? ಯಾರ ಪರ ಪ್ರಚಾರ ಮಾಡುತ್ತಿದ್ದೀರಿ? ನೀವು ಯಾರ ಆದೇಶವನ್ನು ಅನುಸರಿಸುತ್ತಿದ್ದೀರಿ?” ಎಂದು ಟಿಕಾಯತ್‌ ಪ್ರಶ್ನಿಸಿದ್ದಾರೆ. 

ಇಂಡಿಯಾ ಟಿವಿ ಆ್ಯಂಕರ್ ಸೌರಭ್ ಶರ್ಮಾ ಅವರು ಟಿಕಾಯತ್‌ ಪ್ರಶ್ನೆಗೆ ಸಮರ್ಥನೆ ನೀಡಲು ಪ್ರಯತ್ನಿಸಿದಾಗ, ಮಧ್ಯಪ್ರವೇಶಿಸಿದ ಟಿಕಾಯತ್, “ನೀವು ಈಗ ಮಂದಿರ ಮತ್ತು ಮಸೀದಿಯನ್ನು ತೋರಿಸುತ್ತೀರಾ? ನೀವು ಇದನ್ನು ತೋರಿಸಲು ಸಾಧ್ಯವಿಲ್ಲ. ನೀವು ಟಿವಿ ಚಾನೆಲ್‌ಗಳು ರಾಜಕೀಯ ಪಕ್ಷಕ್ಕಾಗಿ ಪ್ರಚಾರ ಮಾಡುವಂತಿಲ್ಲ.” ಎಂದು ಹೇಳಿದ್ದಾರೆ.

ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಇಂಡಿಯಾ ಟಿವಿಯ ವೃತ್ತಿಪರತೆಯ ಕುರಿತು ನೆಟ್ಟಿಗರು ಕಿಡಿಕಾರಿದ್ದಾರೆ.

ಇದನ್ನೂ ಓದಿನೀಟ್ ಟಾಪರ್‌ಗೆ ಸೀಟು ಸಿಗಲಿಲ್ಲವೆಂದು ಸುಳ್ಳು ಸುದ್ದಿ ಪ್ರಕಟಿಸಿದ ‘ವಿಶ್ವವಾಣಿ’!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News