×
Ad

ರಾಯ್‌ಪುರದಲ್ಲಿ ಕಾಂಗ್ರೆಸ್ ನಿಂದ 'ಅಮರ್ ಜವಾನ್ ಜ್ಯೋತಿ' ನಿರ್ಮಾಣ, ರಾಹುಲ್ ಗಾಂಧಿಯಿಂದ ಶಿಲಾನ್ಯಾಸ

Update: 2022-01-30 14:21 IST

ರಾಯ್ ಪುರ: ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ಅಮರ್ ಜವಾನ್ ಜ್ಯೋತಿಯ ಶಾಶ್ವತ  ಜ್ಯೋತಿಯನ್ನು ‘ನಂದಿಸುವ’ ಹಾಗೂ ಅದನ್ನು ರಾಷ್ಟ್ರೀಯ ಯುದ್ಧ ಸ್ಮಾರಕದೊಂದಿಗೆ ವಿಲೀನಗೊಳಿಸುವ ಬಗ್ಗೆ ನಿರ್ಧರಿಸಿರುವ ಕೇಂದ್ರ ಸರಕಾರದ ಮೇಲೆ ದಾಳಿ ಮಾಡಿದ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಕೇಂದ್ರವು "ಜನರ ಭಾವನೆಗಳೊಂದಿಗೆ" ಆಟವಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ಈಗ ಛತ್ತೀಸ್‌ಗಢಕ್ಕೆ ‘ಅಮರ್ ಜವಾನ್ ಜ್ಯೋತಿ’ ತರಲಿದೆ ಮತ್ತು ರಾಹುಲ್ ಗಾಂಧಿ ಫೆಬ್ರವರಿ 3 ರಂದು ಅಡಿಪಾಯ ಹಾಕಲಿದ್ದಾರೆ ಎಂದು ಅವರು ಹೇಳಿದರು.

"ಅಮರ್ ಜವಾನ್ ಜ್ಯೋತಿ'  ದಿಲ್ಲಿಯಲ್ಲಿ ನಂದಿಸಲಾಗಿದೆ. ಅವರು (ಕೇಂದ್ರ) ಜನರ ಭಾವನೆಗಳೊಂದಿಗೆ ಆಟವಾಡಿದ್ದಾರೆ ಎಂದು ಬಘೇಲ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಹುತಾತ್ಮ ಯೋಧರ ಗೌರವಾರ್ಥ ರಾಯಪುರದಲ್ಲಿ ಅಮರ್ ಜವಾನ್ ಜ್ಯೋತಿಯಂತೆಯೇ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಶನಿವಾರ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News