×
Ad

ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರೂಪಿಸಬೇಕು: ಅರವಿಂದ ಕೇಜ್ರಿವಾಲ್

Update: 2022-01-30 15:07 IST

ಚಂಡಿಗಡ: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಪಂಜಾಬ್‌ನ ಜಲಂಧರ್ ನಗರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರೂಪಿಸಬೇಕು ಎಂದು ಪ್ರತಿಪಾದಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.

"ಧಾರ್ಮಿಕ ಮತಾಂತರಗಳ ವಿರುದ್ಧ ಖಂಡಿತವಾಗಿಯೂ ಕಾನೂನನ್ನು ಮಾಡಬೇಕು.  ಆದರೆ, ಈ ಮೂಲಕ ಯಾರಿಗೂ ತಪ್ಪಾಗಿ ಕಿರುಕುಳ ನೀಡಬಾರದು. ಅವರನ್ನು (ಜನರನ್ನು) ಹೆದರಿಸುವ ಮೂಲಕ ಮಾಡಿದ ಮತಾಂತರಗಳು ತಪ್ಪು’’ ಎಂದು ಕೇಜ್ರಿವಾಲ್ ಹೇಳಿದರು.

ಧರ್ಮವು ವೈಯಕ್ತಿಕ ವಿಷಯವಾಗಿದೆ ಹಾಗು  ಪ್ರತಿಯೊಬ್ಬರಿಗೂ ಅವರವರ ಆಯ್ಕೆಯ ಪ್ರಕಾರ ಪೂಜಿಸುವ ಹಕ್ಕಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಹೇಳಿದ್ದಾರೆಂದು  ‘ಇಂಡಿಯಾ ಟುಡೇ' ವರದಿ ಮಾಡಿದೆ.

ಉತ್ತರ ಪ್ರದೇಶ, ಕರ್ನಾಟಕ, ಹಿಮಾಚಲ ಪ್ರದೇಶ  ಹಾಗೂ  ಮಧ್ಯಪ್ರದೇಶದಂತಹ ಹಲವಾರು ಭಾರತೀಯ ಜನತಾ ಪಕ್ಷದ ಆಡಳಿತವಿರುವ ರಾಜ್ಯಗಳು ಈಗಾಗಲೇ ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿವೆ. ಹರ್ಯಾಣ ಮತ್ತು ಅಸ್ಸಾಂನಂತಹ ಇತರ ರಾಜ್ಯಗಳು ಸಹ ಇಂತಹ ಕಾನೂನುಗಳನ್ನು ಪರಿಗಣಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News