ಬ್ಯಾರೀಸ್ ವಿದ್ಯಾ ಸಂಸ್ಥೆಗಳ ‘ಸ್ವಚ್ಛ ಕಡಲ ತೀರ, ಹಸಿರು ಕೋಡಿ - 2022’ ಅಭಿಯಾನ
Update: 2022-01-30 20:23 IST
ಕುಂದಾಪುರ, ಜ.30: ಕೋಡಿ ಬ್ಯಾರೀಸ್ ವಿದ್ಯಾ ಸಂಸ್ಥೆಗಳ ವತಿಯಿಂದ ಹಮ್ಮಿ ಕೊಳ್ಳಲಾದ ‘ಸ್ವಚ್ಛ ಕಡಲ ತೀರ, ಹಸಿರು ಕೋಡಿ-2022’ ಅಭಿಯಾನದ ಪ್ರಥಮ ಹಂತವು ರವಿವಾರ ಕೋಡಿಯಲ್ಲಿ ಜರಗಿತು.
ಬ್ಯಾರೀಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ, ಸ್ವಚ್ಛ ಮನಸ್ಸುಗಳಿಂದ ನಡೆಯುತ್ತಿರುವ ಈ ಸ್ವಚ್ಛತಾ ಅಭಿಯಾನ, ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿ ಹಾಗೂ ಯುವಜನತೆಯಲ್ಲಿ ಪರಿಸರದ ಸದ್ಬಳಕೆ ಹಾಗೂ ಸಂರಕ್ಷಣೆಯ ಕುರಿತು ಕೆಲಸ ಮಾಡುವ ಪ್ರವೃತ್ತಿಯನ್ನು ಹುಟ್ಟುಹಾಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾರೀಸ್ ಗ್ರೂಪ್ ಆಫ್ ಇನ್ಸಿಟ್ಯೂಟ್‌ನ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಮಾತನಾಡಿದರು. ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯ ಸದಸ್ಯರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಪೋಷಕರು, ಊರಿನ ಪ್ರಮುಖರು, ಪರಿಸರ ಪ್ರೇಮಿಗಳು ಪಾಲ್ಗೊಂಡು ಕೋಡಿಯ ಕಡಲ ತೀರವನ್ನು ಸ್ವಚ್ಛಗೊಳಿಸಿದರು.