×
Ad

ದಿಲ್ಲಿ: ಕಾಲೇಜ್‌ ಕ್ಯಾಂಪಸ್‌ ನೊಳಗೆ ʼಗೋಕೇಂದ್ರ ನಿರ್ಮಾಣʼ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

Update: 2022-01-31 19:46 IST
 photo:PTI

ಹೊಸದಿಲ್ಲಿ,ಜ.31: ಕ್ಯಾಂಪಸ್ ನ ಒಳಗೆ ಗೋ ರಕ್ಷಣಾ ಮತ್ತು ಸಂಶೋಧನಾ ಕೇಂದ್ರದ ಸ್ಥಾಪನೆಯನ್ನು ವಿರೋಧಿಸಿ ಹಲವಾರು ವಿದ್ಯಾರ್ಥಿಗಳು ಸೋಮವಾರ ದಿಲ್ಲಿ ವಿವಿಯ ಹಂಸರಾಜ ಕಾಲೇಜಿನ ಹೊರಗೆ ಪ್ರತಿಭಟನೆ ನಡೆಸಿದರು. ಉದ್ದೇಶಿತ ಸ್ಥಳದಲ್ಲಿ ಮಹಿಳಾ ಹಾಸ್ಟೆಲ್ ಸ್ಥಾಪಿಸುವಂತೆ ಅವರು ಆಗ್ರಹಿಸಿದರು.

ಮಹಿಳೆಯರ ಹಾಸ್ಟೆಲ್‌ಗಾಗಿ ಮೀಸಲಿರಿಸಿದ್ದ ಜಾಗದಲ್ಲಿ ಸ್ವಾಮಿ ದಯಾನಂದ ಗೋರಕ್ಷಣಾ ಮತ್ತು ಸಂಶೋಧನಾ ಕೇಂದ್ರದ ಹೆಸರಿನಲ್ಲಿ ಗೋಶಾಲೆಯನ್ನು ನಿರ್ಮಿಸಲಾಗಿದೆ ಎಂದು ಸ್ಟುಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ)ದ ಹಂಸರಾಜ ಕಾಲೇಜು ಘಟಕವು ಆರೋಪಿಸಿದೆ.

ಕೇಂದ್ರದಲ್ಲಿ ಸಂಶೋಧನಾ ಉದ್ದೇಶಗಳಿಗಾಗಿ ಒಂದು ಗೋವನ್ನು ಮಾತ್ರ ಇರಿಸಲಾಗಿದೆ. ಕೇಂದ್ರವನ್ನು ನಿರ್ಮಿಸಿರುವ ಸ್ಥಳವು ಕಾಲೇಜು ಕಟ್ಟಡದ ಹಿಂದಿದ್ದು,ಅಲ್ಲಿ ಹಾಸ್ಟೆಲ್ ನಿರ್ಮಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಾಂಶುಪಾಲೆ ರಮಾ ಶರ್ಮಾ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News