×
Ad

ಖಾಸಗೀಕರಣ ವಿರೋಧಿಸಿ ವಿದ್ಯುತ್ ಕ್ಷೇತ್ರದ ನೌಕರರಿಂದ ಮಂಗಳವಾರ ದೇಶಾದ್ಯಂತ ಪ್ರತಿಭಟನೆ

Update: 2022-01-31 22:29 IST

ಹೊಸದಿಲ್ಲಿ, ಜ. 31: ಕೇಂದ್ರ ಸರಕಾರದ ಖಾಸಗೀಕರಣ ನೀತಿಯ ವಿರುದ್ಧ ವಿದ್ಯುತ್ ಕ್ಷೇತ್ರದ ನೌಕರರು ದೇಶಾದ್ಯಂತ ಮಂಗಳವಾರ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಗಳ ಒಕ್ಕೂಟ (ಎಐಪಿಇಎಫ್) ಹೇಳಿದೆ. 

ವಿದ್ಯುತ್ ಕ್ಷೇತ್ರದ ನೌಕರರ, ಎಂಜಿನಿಯರ್ಗಳ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್ಸಿಸಿಒಇಇಇ) ನೀಡಿದ ಕರೆಯಂತೆ ಕೇಂದ್ರ ಸರಕಾರದ ಖಾಸಗೀಕರಣ ನೀತಿ ವಿರುದ್ಧ ವಿದ್ಯುತ್ ಕ್ಷೇತ್ರದ ನೌಕರರು ಹಾಗೂ ಎಂಜಿನಿಯರ್ ಗಳು ದೇಶಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದ ಎಐಪಿಇಎಫ್ ನ ಹೇಳಿಕೆ ತಿಳಿಸಿದೆ. 

ಎನ್ಸಿಸಿಒಇಇಇ ಕರೆಯಂತೆ ಸುಮಾರು 15 ಲಕ್ಷ ನೌಕರರು ಹಾಗೂ ಎಂಜಿನಿಯರ್‌ ಗಳು ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಚಂಡಿಗಢ ಯುಟಿ ವಿದ್ಯುತ್ ಇಲಾಖೆಯ ಖಾಸಗೀಕರಣ ವಿರುದ್ಧ ಎನ್ಸಿಸಿಒಇಇಇ ಕೋರ್ ಸಮಿತಿಯ ನಾಯಕರು ಪಂಜಾಬ್ ರಾಜ್ಯಪಾಲರನ್ನು ಫೆಬ್ರವರಿ 1ರಂದು ಭೇಟಿಯಾಗಲು ಹಾಗೂ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕೂಡ ಎನ್ಸಿಸಿಒಇಇ ನಿರ್ಧರಿಸಿದೆ. ಪುದುಚೇರಿಯಲ್ಲಿ ಫೆಬ್ರವರಿ 2ರಂದು ನಡೆಯಲಿರುವ ಪುದುಚೇರಿ ವಿದ್ಯುತ್ ಉದ್ಯೋಗಿಗಳ ರ್ಯಾಲಿಯಲ್ಲಿ ಎನ್ಸಿಸಿಒಇಇಇ ಮುಖ್ಯ ಸಮಿತಿಯ ಪದಾಧಿಕಾರಿಗಳು ಮಾತನಾಡಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News