​ಕೆನಡಾ ಪ್ರಧಾನಿಗೆ ಕೋವಿಡ್ ಪಾಸಿಟಿವ್

Update: 2022-02-01 01:45 GMT

ಟೊರೋಂಟೊ: ಕೆನಡಾ ಪ್ರಧಾನಿ ಜೆಸ್ಟಿನ್ ಟ್ರುದೇವ್ ಅವರಿಗೆ ಕೆವಿಡ್-19 ಸೋಂಕು ದೃಢಪಟ್ಟಿದೆ. ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ. ಆದರೆ "ನಾನು ಚೆನ್ನಾಗಿದ್ದೇನೆ ಹಾಗೂ ದೂರಪ್ರದೇಶದಿಂದಲೇ ಕಾರ್ಯ ಮುಂದುವರಿಸಲಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, "ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಂಡು ಪ್ರತಿರೋಧ ಶಕ್ತಿ ಹೆಚ್ಚಿಸಿಕೊಳ್ಳಿ" ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಪಾಸಿಟಿವ್ ವ್ಯಕ್ತಿಯ ಜತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಐಸೊಲೇಶನ್‌ಗೆ ಒಳಪಡುವುದಾಗಿ ಕಳೆದ ಗುರುವಾರ ಟ್ರುದೇವ್ ಪ್ರಕಟಿಸಿದ್ದರು. ಕೋವಿಡ್ ಸೋಂಕಿತ ವ್ಯಕ್ತಿ ತಮ್ಮ ಮೂವರು ಮಕ್ಕಳಲ್ಲೊಬ್ಬರು ಎಂದು ಸ್ಪಷ್ಟಪಡಿಸಿದ್ದರು. ಇದಕ್ಕೂ ಮುನ್ನ ಪತ್ನಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಟ್ರುದೇವ್ ಐಸೊಲೇಶನ್‌ಗೆ ಒಳಗಾಗಿದ್ದರು.

ಕೊರೋನ ವೈರಸ್ ವಿರುದ್ಧದ ಲಸಿಕೆ ನೀಡಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಕೆನಡಾದಲ್ಲಿ, ಮೂಲಭೂತವಾಗಿ ಸೋಂಕಿತರು ಗಂಭೀರ ಅಸ್ವಸ್ಥತೆಗೆ ಒಳಗಾಗುವುದನ್ನು ತಡೆಯಲು ಲಸಿಕೆ ನೀಡಲಾಗುತ್ತಿದೆ.

ಕಡ್ಡಾಯ ಲಸಿಕೆ, ಮಾಸ್ಕ್ ಮತ್ತು ಲಾಕ್‌ಡೌನ್ ನಿರ್ಧಾರಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ನಡುವೆಯೇ ಪ್ರಧಾನಿ ಸೋಂಕಿತರಾಗಿರುವ ಅಂಶ ಬೆಳಕಿಗೆ ಬಂದಿದೆ. ಕೆಲ ಲಾರಿ ಚಾಲಕರು ಪ್ರತಿಭಟನೆ ಅಂಗವಾಗಿ ತಮ್ಮ ಲಾರಿಗಳನ್ನು ಸಂಸತ್ ಭವನದ ಸುತ್ತ ಬೀದಿಗಳಲ್ಲಿ ನಿಲ್ಲಿಸಿ ಸಂಚಾರಕ್ಕೆ ತಡೆ ಒಡ್ಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News