×
Ad

ಸ್ವಯಂ ನಿವೃತ್ತಿ ಪಡೆದ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್‌ ಸಿಂಗ್:‌ ಬಿಜೆಪಿ ಸೇರುವ ಸಾಧ್ಯತೆ!

Update: 2022-02-01 19:33 IST

ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಅವರು ಕೇಂದ್ರ ಸರ್ಕಾರದಿಂದ ಸೇವೆಯಿಂದ ಸ್ವಯಂ ನಿವೃತ್ತಿ (VRS) ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಬಿಜೆಪಿಗೆ ಸೇರುವ ಸಾಧ್ಯತೆ ದಟ್ಟವಾಗಿದ್ದು, ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಇದುವರೆಗೆ ಲಕ್ನೋದಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಜಂಟಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಸಿಂಗ್ ಅವರು 'ತನ್ನ ಬೂಟುಗಳನ್ನು ನೇತುಹಾಕುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.

ಇಡಿ ಅಧಿಕಾರಿಯಾಗಿ ಅವರ ಆದೇಶದ ಮೇರೆಗೆ 4,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ʼಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆʼಯಡಿ ಜಪ್ತಿ ಮಾಡಲಾಗಿದೆ ಎಂದು ದಿ ಹಿಂದೂ ವರದಿ ಮಾಡಿದೆ.

2ಜಿ ತರಂಗಾಂತರ ಹಂಚಿಕೆ ಪ್ರಕರಣ, 2010ರ ಕಾಮನ್‌ವೆಲ್ತ್ ಗೇಮ್ಸ್, ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಸೇರಿದಂತೆ, ಈಗ ವಿರೋಧ ಪಕ್ಷದಲ್ಲಿರುವ ರಾಜಕಾರಣಿಗಳನ್ನು ಒಳಗೊಂಡ ಕೆಲವು ಉನ್ನತ ಮಟ್ಟದ ತನಿಖೆಗಳನ್ನು ಸಿಂಗ್ ನೇತೃತ್ವ ವಹಿಸಿದ್ದಾರೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ, ಏರ್‌ಸೆಲ್ ಮ್ಯಾಕ್ಸಿಸ್ ಮತ್ತು ವಿವಿಐಪಿ ಚಾಪರ್ಸ್ ಪ್ರಕರಣದ ನೇತೃತ್ವವನ್ನು ರಾಜೇಶ್ವರ್‌ ವಹಿಸಿಕೊಂಡಿದ್ದರು.

“ಇಂದು ಭಾರತ ಸರ್ಕಾರದ ಸೇವೆಯಿಂದ ಸ್ವಯಂ ನಿವೃತ್ತಿ (VRS) ಗಾಗಿ ನಾನು ಸಲ್ಲಿಸಿದ್ದ ಮನವಿಯನ್ನು ಅನುಮೋದಿಸಲಾಗಿದೆ. 24 ವರ್ಷಗಳ ಅವಿಶ್ರಾಂತ ಮತ್ತು ಆತ್ಮಸಾಕ್ಷಿಯ ಕಠಿಣ ಪರಿಶ್ರಮದ ಸೇವೆ ಇಂದು ಪರಿವರ್ತನೆಯ ಹಂತವನ್ನು ತಲುಪಿದೆ, ”ಎಂದು ಅವರು ಸೋಮವಾರ ರಾತ್ರಿ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಇಡಿ ನಿರ್ದೇಶಕ ಎಸ್.ಕೆ. ಮಿಶ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. 

“ನಾನು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಪ್ರಧಾನಮಂತ್ರಿ ಧ್ಯೇಯದಲ್ಲಿ ಪಾಲ್ಗೊಳ್ಳುವವನಾಗಿ, ರಾಷ್ಟ್ರ ನಿರ್ಮಾಣದ ಈ ಪ್ರಕ್ರಿಯೆಯಲ್ಲಿ ದೃಢತೆ ಮತ್ತು ಸಮಗ್ರತೆಯಿಂದ ಕೊಡುಗೆ ನೀಡಲು ಸೇರುತ್ತೇನೆ, ”ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News